ಸಾಮಾನ್ಯ ರೈತನೊಬ್ಬ ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಯ ದೇವಾಲಯವನ್ನು ನಿರ್ಮಾಣ ಮಾಡಿದ್ದು ಯಾಕೆ ಗೊತ್ತಾ??

ಸಾಮಾನ್ಯ ರೈತನೊಬ್ಬ ಈ ಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಯ ದೇವಾಲಯವನ್ನು ನಿರ್ಮಾಣ ಮಾಡಿದ್ದು ಯಾಕೆ ಗೊತ್ತಾ??

ನಮಸ್ತೆ ಪ್ರಿಯ ಓದುಗರೇ, ಶಿವನ ರೌದ್ರಾವತಾರದಿಂದ ಜನಿಸಿದ ವೀರಭದ್ರ ಸ್ವಾಮಿಯನ್ನು ಪೂಜಿಸುವ ಅಸಂಖ್ಯಾತ ಭಕ್ತರು ನಮ್ಮ ನಾಡಿನಲ್ಲಿ ಇದ್ದಾರೆ. ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ದಯಪಾಲಿಸುವ ಈ ಸ್ವಾಮಿಯನ್ನು ನಂಬಿದರೆ ಆತ ಎಂದಿಗೂ ನಮ್ಮ ಕೈ ಬೋಡಿದಿಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ವೀರ್ಭದ್ರ ಸ್ವಾಮಿ ನೆಲೆಸಿರುವ ಪ್ರಸಿದ್ಧ ಪುಣ್ಯ ಕ್ಷೇತ್ರದ ದರ್ಶನ ಮಾಡಿ ವೀರಭದ್ರ ಸ್ವಾಮಿಯ ಕೃಪೆಗೆ ಪಾತ್ರರಾಗೊಣ. ಎತ್ತ ನೋಡಿದರೂ ಕಲ್ಲು ಬಂಡೆ ಕಾಣಿಸುವ ಹಾಗೂ ಪ್ರಶಾಂತವಾಗಿರುವ ವಾತಾವರಣ ಹೊಂದಿರುವ ಉಂಡಬಂಡ ಎಂಬ ಸ್ಥಳದಲ್ಲಿ ಸಾಕ್ಷಾತ್ ವೀರಭದ್ರ ಸ್ವಾಮಿಯೇ ಶಿಲಾ ರೂಪದಲ್ಲಿ ನೆಲೆಸಿದ್ದು, ಈ ದೇವಾಲಯವನ್ನು ಕೋರಪ್ಪ ಶೆಟ್ಟಿ ಅವರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಗರ್ಭಗೃಹ, ಮುಖ ಮಂಟಪ, ಗೋಪುರ, ಪ್ರದಕ್ಷಿಣಾ ಪಥ ಒಳಗೊಂಡಿರುವ ಈ ಆಲಯದಲ್ಲಿ ವೀರಭದ್ರ ಸ್ವಾಮಿಯ ಜೊತೆಗೆ ಭದ್ರಕಾಳಿ ಅಮ್ಮನವರು ನೆಲೆಸಿ ಬೇಡಿ ಬಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾಳೆ. ಅಸಂಖ್ಯಾತ ಭಕ್ತರ ಮನೆಯ ದೇವರಾಗಿರುವ ಉಂಡಬಂದ ವೀರಭದ್ರ ಸ್ವಾಮಿಯ ಸನ್ನಿಧಾನಕ್ಕೆ ಬಂದು ಕೈಲಾದ ಸೇವೆಯನ್ನು ಮಾಡ್ತೀವಿ ಅಂತ ಹರಕೆ ಹೊತ್ತರೆ, ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ.

 

 

 

ಇನ್ನೂ ಈ ಕ್ಷೇತ್ರದಲ್ಲಿ ವೀರಭದ್ರ ಸ್ವಾಮಿ ಬಂದು ನೆಲೆಸಿರುವುದರ ಹಿಂದೆ ಒಂದು ಘಟನೆ ಕೂಡ ಇದೆ. ಬಹಳ ಹಿಂದೆ ಕೊಣಕೊಂಡಲ ಪಟ್ಟಣದಲ್ಲಿ ಕೋರಪ್ಪ ಶೆಟ್ಟಿ ಎಂಬ ರೈತರು ಇದ್ದರೂ ಅವರು ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಾ ಇದ್ರು, ಒಂದು ದಿನ ಕೊರಪ್ಪ ಶೆಟ್ಟಿ ಅವರು ನೆಲ ಉಳುವಾಗ ಅವರ ನೇಗಿಲಿಗೆ ಶಿಲಾ ರೂಪದಲ್ಲಿ ಇರುವ ಪ್ರತಿಮೆಯೊಂದು ಅಡ್ಡಲಾಗಿ ಸಿಗುತ್ತೆ, ಆಗ ಕೊರಪ್ಪಾ ಶೆಟ್ಟಿಯು ಆ ಶಿಲಾ ಪ್ರತಿಮೆಯನ್ನು ಹೊರ ತೆಗೆದು ಅದನ್ನು ಒಂದು ಕಡೆ ಇಟ್ಟು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಮರವೊಂದರ ಕೆಳಗೆ ಮಲಗುತ್ತಾರೆ. ಆಗ ಅವರ ಕನಸಿನಲ್ಲಿ ಸಾಕ್ಷಾತ್ ವೀರಭದ್ರ ಸ್ವಾಮಿ ಕಾಣಿಸಿಕೊಂಡು ನಿನಗೆ ಸಿಕ್ಕಿರುವ ಶಿಲೆಯಲ್ಲಿ ನಾನು ವಾಸವಾಗಿದ್ದೇನೆ. ನೀನು ಆ ಪ್ರತಿಮೆಯನ್ನು ನಿನ್ನ ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಹೋಗು, ಎತ್ತಿನ ಬಂಡಿ ಎಲ್ಲಿ ನಿಲ್ಲುತ್ತದೆ ಅಲ್ಲಿ ನನ್ನನ್ನು ಪ್ರತಿಷ್ಠಾಪಿಸೂ ಎಂದು ಹೇಳಿದರು. ನಂತರ ಶೆಟ್ಟಿಯವರು ಸ್ವಾಮಿಯ ಮಾತಿನಂತೆ ಎತ್ತಿನ ಬಂಡಿಯಲ್ಲಿ ಸ್ವಾಮಿಯ ಮೂರ್ತಿ ಇಟ್ಟುಕೊಂಡು ಹೋದ್ರು, ಎಷ್ಟು ದೂರ ಹೋದ್ರು ಎತ್ತಿನ ಬಂಡಿ ನಿಲ್ಲಲೇ ಇಲ್ಲ. ಶೆಟ್ಟಿಯವರಿಗೆ ಹಸಿವು ಆಗಿದ್ದರಿಂದ ಅವರು ಬಂಡಿಯಿಂದ ಇಳಿದು ಅಲ್ಲೇ ಬಂಡೆಯ ಮೇಲೆ ಕುಳಿತು ಊಟವನ್ನ ಮುಗಿಸಿ ಬಂದ್ರು. ನಂತರ ಎತ್ತಿನ ಬಂಡಿಯನ್ನು ಓಡಿಸಲು ನೋಡಿದ್ರೆ ಬಂಡಿ ಕಿಂಚಿತ್ತೂ ಮುಂದೆ ಹೋಗಲೇ ಇಲ್ಲ. ಆಗ ವೀರಭದ್ರ ಸ್ವಾಮಿಯ ಮಾತುಗಳು ನೆನಪಾಗಿ ಆ ಸ್ಥಳದಲ್ಲಿಯೇ ವೀರಭದ್ರ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದ್ರೂ. ಇಂದಿಗೂ ಇಲ್ಲಿ ಎತ್ತಿನ ಬಂಡಿ ಚಕ್ರಗಳನ್ನು ನಾವು ನೋಡಬಹುದು.

 

 

 

ಕೋರಪ್ಪಾ ಶೆಟ್ಟಿಯವರು ಊಟಾ ಮಾಡಿದ ಬಂಡೆಯನ್ನು ಉಂಡಬಂಡೆ ಎಂದು ಕರೆಯಲಾಯಿತು. ಈ ರೀತಿಯಾಗಿ ವೀರಭದ್ರ ಸ್ವಾಮಿ ಇಲ್ಲಿಗೆ ಬಂದು ನೆಲೆಸಿದ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅಪಾರ ಮಹಿಮೆಯುಳ್ಳ ವೀರಭದ್ರೇಶ್ವರ ನ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೆಯನ್ನು ಆಚರಿಸುತ್ತಾರೆ. ಈ ಸಮಯದಲ್ಲಿ ಕರ್ನಾಟಕ ಅಲ್ಲದೆ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಅಲ್ಲದೆ ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಪೂಜೆ ಮಾಡಿಸುವ ಭಕ್ತರಿಗೆ ಉಚಿನ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಸಾಕಷ್ಟು ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಕ್ಕಿ ಬೇಳೆ ಗೋದಿ ಬೆಲ್ಲ ದೀಪದ ಎಣ್ಣೆ ಕೊಡುವ ಪರಿಪಾಠವೂ ಈ ಕ್ಷೇತ್ರದಲ್ಲಿ ಇದೆ. ನಿತ್ಯವೂ ಇಲ್ಲಿ ನೆಲೆಸಿರುವ ವೀರಭದ್ರ ಸ್ವಾಮಿ ಹಾಗೂ ಭದ್ರಕಾಳಿ ಅಮ್ಮನವರಿಗೆ ಪೂಜೆಯನ್ನು ಮಾಡಲಾಗುತ್ತದೆ. ಬೆಳಿಗ್ಗೆ 5 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ಇದೆ. ಸಾಕ್ಷಾತ್ ವೀರಭದ್ರ ಸ್ವಾಮಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಆಂಧ್ರ ಪ್ರದೇಶ ಜಿಲ್ಲೆಯ ಕಡಪ ತಾಲೂಕಿನ ವೀಡಪನ ಕಲ್ಲು ಮಂಡಲದ ಪಾಲ್ತೋರು ಗ್ರಾಮದಲ್ಲಿ ಬರುವ ಉಂಡಬಂಡೇ ಎಂಬ ಸ್ಥಳದಲ್ಲಿ ಇದೆ. ಸಾಧ್ಯವಾದರೆ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದಾಗ ನೀವು ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ವೀರಭದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಿ. ಶುಭದಿನ.

ಭಕ್ತಿ