ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಹೇಳುತ್ತವೆ!!!

ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಹೇಳುತ್ತವೆ!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವೂ ನಮ್ಮ ಆರೋಗ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ ನಮ್ಮ ಕಣ್ಣುಗಳನ್ನು ನಮ್ಮ ನಾಲಿಗೆಯನ್ನು ನೋಡು ವೈದ್ಯರು ನಮಗೆ ಯಾವ ರೋಗ ಬಂದಿದೆ ಎಂದು ತಿಳಿಸುತ್ತಾರೆ. ಇಷ್ಟೇ ಅಲ್ಲದೇ ವೈದ್ಯರು ನಮ್ಮ ಕೈ ಬೆರಳುಗಳನ್ನು ನೋಡಿಕೊಂಡು ನಮ್ಮ ದೇಹದಲ್ಲಿ ರಕ್ತ ಇದಿಯೋ ಇಲ್ಲವೋ ಎಂದು ಪತ್ತೆ ಹಚ್ಚುತ್ತಾರೆ. ದೇಹದಲ್ಲಿ ಏನಾದರೂ ಏರು ಪೇರು ಆದಾಗ ನಮ್ಮ ದೇಹವೇ ನಮಗೆ ಹಲವಾರು ಮುನ್ಸೂಚನೆ ನೀಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅದೇ ರೀತಿ ಶರೀರದಲ್ಲಿ ಬದಲಾವಣೆ ಸೂಚಿಸುವ ಕೆಲವು ಅಂಗಗಳು ಬದಲಾಗುತ್ತವೆ. ಅದರ ಅರ್ಥ ನಮಗೆ ತಿಳಿದಿರುವುದಿಲ್ಲ.

 

 

 

ಹೀಗಾಗಿ ನಮ್ಮ ಉಗುರುಗಳು ನಮ್ಮ ದೇಹದ ಬಗ್ಗೆ ಏನು ಹೇಳುತ್ತವೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಉಗುರಿನಲ್ಲಿ ಇರುವ ಅರ್ಧ ಚಂದ್ರ ಆಕೃತಿ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ನಮ್ಮ ಉಗುರಿನಲ್ಲಿ ದೊಡ್ಡದಾದ ಚಂದ್ರಾಕಾರದ ಮಚ್ಚೆ ಇದ್ದರೆ ಆರೋಗ್ಯ ತುಂಬಾ ಚೆನ್ನಾಗಿದೆ ಎಂದರ್ಥ. ಚಿಕ್ಕದಾಗಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಎಂದು ಅರ್ಥ. ಇವರಿಗೆ ಪಚನ ಕ್ರಿಯೆ ನಿಧಾನವಾಗಿ ಇರುತ್ತದೆ. ಒಂದುವೇಳೆ ಚಂದ್ರಾಕಾರಾದ ಮಚ್ಚೆ ನಿಮ್ಮ ಉಗುರಿನಲ್ಲಿ ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿ ಗಳು ದುರ್ಬವಾಗಿದ್ದು, ದಪ್ಪ ಆಗುವುದು ಮತ್ತು ಕೂದಲು ಉದುರುವುದು ಸಹಜ ಆಗಿರುತ್ತದೆ. ಇರುವ ಹತ್ತು ಬೆರಳುಗಳಲ್ಲಿ ಕನಿಷ್ಟ ಎಂಟು ಉಗುರುಗಳ ಮೇಲೆ ಚಂದ್ರನ ಗುರುತು ಇರಬೇಕು.

 

 

 

ಇಲ್ಲವಾದರೆ ವಿಟಮಿನ್ ಏ ಮತ್ತು ಅಗತ್ಯ ಪೋಷಕಾಂಶಗಳು ಕೊರತೆ ಇದೆ ಎಂದು ಅರ್ಥ. ಮತ್ತೆ ನೀವು ನೋಡಿರಬಹುದು ನಮ್ಮ ಉಗುರುಗಳಲ್ಲಿ ಒಮ್ಮೊಮ್ಮೆ ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತದೆ ಮತ್ತೆ ತಾನೇ ತಾನಾಗಿ ಮಾಯವಾಗಿರುತ್ತದೆ. ಇಂತಹ ಸಮಸ್ಯೆ ಹೊಂದಿರುವವರು ದೇಹ ಹೇಳುವಷ್ಟು ಆಹಾರ ಸೇವನೆ ಮಾಡುತ್ತಿಲ್ಲ ಎಂದು ಪರಿಗಿಸಲಾಗಿದೇ. ಮತ್ತು ನಮ್ಮ ಉಗುರುಗಳು ಹರಿಷಿನ ಬಣ್ಣಕ್ಕೆ ತಿರುಗಿದರೇ ನಮಗೆ ಲಿವರ್ ಸಮಸ್ಯೆ ಇರಬಹುದು ಮತ್ತು ಇದು ಕಾಮಾಲೆ ರೋಗದ ಲಕ್ಷಣ ಕೂಡ ಆಗಿರಬಹುದು. ನಮ್ಮ ಉಗುರುಗಳು ಜಾಸ್ತಿ ಬಿಳಿ ಆಗಿದ್ದರೆ, ನಮ್ಮ ದೇಹದಲ್ಲಿ ರಕ್ತ ಕಡಿಮೆ ಇದೆ ಎಂದು ಸೂಚಿಸುತ್ತದೆ. ನೋಡಿದ್ರಲ್ವ ಸ್ನೇಹಿತರೆ ನಮ್ಮ ಉಗುರುಗಳನ್ನು ನೋಡಿಕೊಂಡು ನಮ್ಮ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆ ಆಗುತ್ತದೆ ಎಂದು ತಿಳಿಯಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು