ತಲೆಗೆ ಏಟು ಬಿದ್ದಾಗ ದೊಡ್ಡ ಗಾಯವಲ್ಲ ಅಂತ ನಿರ್ಲಕ್ಷ್ಯ ಮಾಡಬೇಡಿ…!

ತಲೆಗೆ ಏಟು ಬಿದ್ದಾಗ ದೊಡ್ಡ ಗಾಯವಲ್ಲ ಅಂತ ನಿರ್ಲಕ್ಷ್ಯ ಮಾಡಬೇಡಿ…!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ತಲೆಗೆ ಏಟು ಬಿದ್ದಾಗ ನಾವು ಮೊದಲು ಏನು ಮಾಡಬೇಕು ಅಂದ್ರೆ ಫಸ್ಟ್ ಏಡ್ , ಅಥವಾ ನೆಕ್ಸ್ಟ್ ಐಸಿಯು ಕೇರ್, ಅಥವಾ ಆಪರೇಷನ್ ಇವುಗಳಲ್ಲಿ ಏನೇನು ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ತಲೆಗೆ ಏಟು ಆಗೋದು ಸಾಮಾನ್ಯವಾಗಿ ನಾವು ಮೋಟಾರ್ ಬೈಕ್ ಓಡಿಸುವಾಗ, ತುಂಬಾ ಮೇಲಿನಿಂದ ಕಾಲು ಜಾರಿ ಬಿದ್ದಾಗ ನೋಡುತ್ತೇವೆ. ಆವಾಗ ತಲೆಗೆ ಏಟು ಆಗುವುದನ್ನು ನಾವು ದಿನಪ್ರತೀ ಹೊರಗಡೆ ನೋಡ್ತಾ ಇರ್ತೀವಿ. ತಲೆಗೆ ಪೆಟ್ಟು ಬಿದ್ದಾಗ ನಮ್ಮ ಬುರುಡೆಯ ಒಳಗೆ ನರಗಳು ಇರುತ್ತವೆ. ರಕ್ತ ನಾಳಗಳು ಇರುತ್ತವೆ ಮತ್ತು ಮಾಂಸ ಖಂಡ ಇರುತ್ತೆ. ಸೋ ಈಗ ರಕ್ತ ನಾಳಕ್ಕೆ ಏಟು ಆಯ್ತು ಅಂದ್ರೆ ರಕ್ತ ಸ್ರಾವ ಆಗುತ್ತದೆ ಮತ್ತು ನರಕ್ಕೆ ಏಟು ಬಿದ್ರೆ ಕೋಮಾ ಗೆ ಹೋಗುವ ಚಾನ್ಸ್ ಇರುತ್ತೆ.

 

 

 

ಮಾಂಸ ಖಂಡಕ್ಕೆ ಏಟು ಬಿದ್ರೆ ಊತ ಬರುತ್ತೆ. ಊತ ಆದ್ರೆ, ನರಗಳಿಂದ ರಕ್ತ ಸ್ರಾವ ಆದ್ರೆ ತಲೆಗೆ ಒತ್ತಡ ಉಂಟಾಗುತ್ತದೆ. ನಮ್ಮ ಮೆದುಳಿನ ಒಳಗಡೆ ತುಂಬಾ ಚಿಕ್ಕ ಜಾಗ ಇದ್ದು, ಅದರ ಒಳಗೆ ಏನೇ ಊತ ರಕ್ತಸ್ರಾವ ಆದ್ರೆ ಅದು ನಮ್ಮ ಮೆದುಳಿಗೆ ಒತ್ತಡ ಉಂಟು ಮಾಡುತ್ತದೆ. ಒತ್ತಡ ಉಂಟಾದಾಗ ನಮ್ಮ ಮೆದುಳಿನ ನರಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಹಾಗಾಗಿ ಈ ತರಹದ ಸೂಚನೆಗಳು ಕಂಡು ಬಂದಾಗ. ಬಲ ಭಾಗದ ಮೆದುಳಿಗೆ ಪೆಟ್ಟು ಬಿದ್ದು, ಅಲ್ಲಿ ರಕ್ತ ಸ್ರಾವ ಆಯ್ತು ಅಂದ್ರೆ ಒತ್ತಡ ಜಾಸ್ತಿ ಉಂಟಾಗಿ ಆ ಒತ್ತಡ ಎಡ ಭಾಗದ ಮೆದುಳಿಗೂ ಬಂದಾಗ ತಕ್ಷಣ ಆಪರೇಷನ್ ಮಾಡಬೇಕಾಗುತ್ತದೆ. ಹೀಗೆ ಆದಾಗ ಅವರಿಗೆ ಕಂಶಿಯಸ್ ಕಮ್ಮಿ ಇರುತ್ತೆ. ಅವರಿಗೆ ವಾಂತಿ ಆಗಿ, ಉಸಿರಾಟದ ತೊಂದರೆ ಉಂಟಾಗುತ್ತದೆ. ಹೀಗೆ ಆದಾಗ ಅಂತಹ ರೋಗಿಗಳನ್ನು ಮೊದಲು ಗಂಟಲ ಮೂಲಕ ಪೈಪ್ ಹಾಕಿ ಅವರಿಗೆ ವೆಂಟಿಲೇಟರ್ ಗೆ ಹಾಕಲಾಗುತ್ತದೆ. ಗ್ಲಾಸೋ ಸ್ಕೇಲ್ ಮೂಲಕ ಮನುಷ್ಯನ ಕನ್ಸಿಯಸ್ ನ ಅಳೆಯಲಾಗುತ್ತದೆ. ಅದು 8 ಕ್ಕಿಂತ ಕಮ್ಮಿ ಬಂತು ಅಂದ್ರೆ , ನಾವು ಟುಬ್ ಹಾಕಿ ವೆಂಟಿಲೇಟರ್ ಗೆ ಹಾಕಿ ಕೃತಕ ಉಸಿರಾಟ ಕೊಡಬೇಕಾಗುತ್ತದೆ. ಮೆದುಳಲ್ಲಿ ಊತಾ ಆದ್ರೆ ಕೆಲವು ಮಾತ್ರೆಗಳು ಕೂಟ್ಟು ಸರಿ ಮಾಡುತ್ತಾರೆ. ಒಂದುವೇಳೆ ಕಡಿಮೆ ಒತ್ತಡ ಬಿದ್ದು, ಕಡಿಮೆ ರಕ್ತಸ್ರಾವ ಆಗಿದ್ದರೆ ಮಾತ್ರೆಗಳನ್ನು ಕೊಟ್ಟು ರಕ್ತ ಸ್ರಾವ ಆಗುವುದನ್ನು ನಿಲ್ಲಿಸಬಹುದು.

 

 

 

ಹೀಗೆ ಆದಾಗ ಪ್ರತಿ 24, 48, 72 ಗಂಟೆಗಳಿಗೂ ಸ್ಕ್ಯಾನ್ ಮಾಡಿ ನೋಡ್ತಾ ಇರಬೇಕಾಗುತ್ತದೆ. ಒಮ್ಮೊಮ್ಮೆ ನರಕ್ಕೆ ಏಟು ಬಿದ್ದು, ರಿಗಿ ಕೋಮಾ ಗೆ ಹೋದಾಗ ಮತ್ತೆ ಸ್ಮೃತಿಗೆ ಮರಳುವುದು ತುಂಬಾ ಕಡಿಮೆ. ಈಗ ಚರ್ಮಕ್ಕೆ ಏಟು ಬಿದ್ರೆ ಅದು ಮತ್ತೆ ಹೊಸದಾಗಿ ಬೆಳೆಯುತ್ತೆ ಆದ್ರೆ ನರಕ್ಕೆ ಏಟು ಬಿದ್ರೆ ಅದು ಮತ್ತೆ ಮೊದಲಿನ ಹಾಗೆ ಆಗುವುದು ತುಂಬಾ ವಿರಳ. ಸೋ ಹೀಗೆ ಮೆದುಳಿಗೆ ಏಟು ಬಿದ್ದಾಗ ಮೊದಲು ರೋಗಿಗೆ ಎಷ್ಟು ನೋವಾಗಿದೆ ರಕ್ತ ಸ್ರಾವ ಆಗಿದೆಯೋ, ಮಾಂಸ ಖಂಡಕ್ಕೆ ಏಟು ಬಿದ್ದಿದೆಯೇ, ನರಕ್ಕೆ ಏಟು ಬಿದ್ದಿದೆಯೇ ನೋಡಿ, ಅದಕ್ಕೆ ಅನುಗುಣವಾದ ಟ್ರೀಟ್ಮೆಂಟ್ ಕೊಡಲಾಗುತ್ತದೆ. ತಲೆಗೆ ಒಮ್ಮೊಮ್ಮೆ ಏಟು ಬಿದ್ದಾಗ ಪಿಡ್ಸ್ ಬರುವ ಚಾನ್ಸ್ ಇರುತ್ತೆ. ಅದನ್ನು ಬರದ ಹಾಗೆ ಟ್ರೀಟ್ಮೆಂಟ್ ಕೊಡಲಾಗುತ್ತದೆ. ಸೆಪ್ಟಿಕ್ ಆದ್ರೆ ಅದಕ್ಕೂ ಸರಿಯಾದ ಟ್ರೀಟ್ಮೆಂಟ್ ಕೊಡಲಾಗುತ್ತದೆ. ಮೆದುಳಿಗೆ ಪೆಟ್ಟು ಬಿದ್ದಾಗ, ರೋಗಿಗೆ ಪೌಷ್ಟಕಾಂಶಯುಕ್ತ ಉಪಚಾರ ಎಲ್ಲಾ ಒದಗಿಸಿ ಐಸಿಯು ಅಲ್ಲಿ ಅವರನ್ನು ಹೊರತರುವ ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ನೋಡಿದ್ರಲ್ವಾ ಸ್ನೇಹಿತರೆ ಹೀಗೆ ಮೆದುಳಿಗೆ ಏಟು ಬಿದ್ರೆ ಏನೆಲ್ಲಾ ವೈದ್ಯರು ಮಾಡುತ್ತಾರೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ