ಕಾಳಿ ನದಿ ಮಧ್ಯದಲ್ಲಿ ನೆಲೆ ನಿಂತು ಭಕ್ತರನ್ನು ಹರಡುತ್ತಿರುವ ದೇವಿ ಇವಳು..!!!

ಕಾಳಿ ನದಿ ಮಧ್ಯದಲ್ಲಿ ನೆಲೆ ನಿಂತು ಭಕ್ತರನ್ನು ಹರಡುತ್ತಿರುವ ದೇವಿ ಇವಳು..!!!

ನಮಸ್ತೆ ಪ್ರಿಯ ಓದುಗರೇ, ಕಾರವಾರ ಇಂದ ತಕ್ಷಣ ಮನಸ್ಸಿನಲ್ಲಿ ಮೂಡುವುದು ಸಮುದ್ರದ ಅಲೆಗಳ ಸುಂದರವಾದ ಏರಿಳಿತದ ದೃಶ್ಯ. ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಈ ಊರು ತನ್ನ ಒಡಲಲ್ಲಿ ಅಪಾರವಾದ ನಿಸರ್ಗದ ಸೌಡರ್ಯವನ್ನು ಹೊತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದರಲ್ಲೂ ಇಲ್ಲಿ ಹರಿಯುವ ಕಾಳಿ ನದಿಯು ಈ ಬಾಗದ ಜನರ ಜೀವ ನೆಲೆ ಆಗಿದ್ದಾಳೆ. ಸ್ನೇಹಿತರೆ ಕಾರವಾರ ಕೇವಲ ನೈಸರ್ಗಿಕ ಸೌಂದರ್ಯ ಮಾತ್ರ ಜನರನ್ನು ಆಕರ್ಷಿಸುತ್ತಿಲ್ಲಾ ಇಲ್ಲಿರುವ ದೇಗುಲಗಳು ಅಚ್ಚರಿಗಳು ಆಗಿವೆ. ಅದ್ರಲ್ಲಿ ಇವತ್ತು ನಾವು ನಿಮಗೆ ಪರಿಚಯಿಸುವುದಕ್ಕೆ ಹೊರಟಿರುವ ದೇಗುಲವನ್ನು ತುಲಪಬೇಕು ಎಂದರೆ ಕಾಳಿ ನದಿಯನ್ನು ದಾಟಬೇಕು. ಬನ್ನಿ ಹಾಗಾದ್ರೆ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನೇನು ಅನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

 

 

 

ಕಂಡು ಬಣ್ಣದಲ್ಲಿ ವಿಶಾಲವಾಗಿ ಹರಿಯುವ ಕಾಳಿ ನದಿಯ ಮಧ್ಯದಲ್ಲಿ ಸಂತೋಷಿ ಮಾತಾ ಎನ್ನುವ ದೇವಿಯ ದೇವಾಲಯ ಇದ್ದು, ಈ ದೇವಾಲಯವನ್ನು ತಲುಪಬೇಕು ಎಂದ್ರೆ ಕಾಳಿ ನದಿಯಲ್ಲಿ ಬೋಟ್ ಮುಖಾಂತರ ಪ್ರಯಾಣ ಮಾಡಬೇಕು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣಿಸುವ ಹಸಿರು ಬೆಟ್ಟಗಳು ಕಾಳಿ ನದಿಯಲ್ಲಿ ಅಣತಿ ದೂರದವರೆಗೆ ಗೋಚರಿಸುವ ಪುಟ್ಟ ಬೊಟ್ಗಳನ್ನು ನೋಡ್ತಾ ಇದ್ರೆ ಈ ದೇವಾಲಯಕ್ಕೆ ಬಂದು ತಲುಪಿದ್ದು ಗೊತ್ತೇ ಆಗಲ್ಲ. ಪ್ರಕೃತಿಯ ಅಗಣಿತವಾದ ಸಂಪತ್ತಿನ ನಡುವೆ ನೆಲೆ ನಿಂತು ಭಕ್ತರನ್ನು ಉದ್ದರಿಸುತ್ತಿದ್ದಾಳೆ ಈ ಕ್ಷೇತ್ರದಲ್ಲಿ ನೆಲೆ ನಿಂತ ಸಂತೋಷಿ ಮಾತಾ ಅಮ್ಮನವರು. ಈ ದೇಗುಲವನ್ನು ಕಾಳಿ ಮಾತಾ ದೇವಾಲಯ ಎಂದು ಕರೆಯಲಾಗುತ್ತದೆ. ದೇವಾಲಯದ ಮೇಲೆ ನೀಲಿ ವರ್ಣದಲ್ಲಿ ಕಾಳಿ ಮಾತೆಯು ಕಿರೀಟ ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿದು ಶಿವನನ್ನು ಮೆಟ್ಟಿ ನಿಂತ ಪ್ರತಿಮೆಯನ್ನು ಕೆತ್ತಲಾಗಿದ್ದು, ಆಲಯವು ವಿಶಾಲವಾದ ಪ್ರದಕ್ಷಿಣಾ ಪಥ, ಅಂದವಾದ ಗರ್ಭಗೃಹ ಹೊಂದಿದೆ. ಮಂಗಳವಾರ ಅಥವ ಶುಕ್ರವಾರ ದಿನ ಇಲ್ಲಿಗೆ ಬಂದು ದೀಪವನ್ನು ಹೆಚ್ಚಿದರೆ ಮನಸ್ಸಿನ ಎಲ್ಲಾ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ.

 

 

 

ಈ ದೇವಿಯನ್ನು ಪೂಜಿಸಿದರೆ ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಉದ್ಯೋಗ ಸಮಸ್ಯೆ ಇನ್ನೂ ಮುಂತಾದ ಸಮಸ್ಯೆಗಳು ದೂರವಾಗಿ ಬದುಕಿನಲ್ಲಿ ಶಾಂತಿ ನೆಲೆಸುತ್ತದೆ. ಅಭಯ ಹಸ್ತವನ್ನು ಹಿಡಿದು ಸರ್ವಾಲಂಕಾರ ಭೂಷಿತೆ ಆದ ಇಲ್ಲಿನ ಸಂತೋಷಿ ಮಾತಾ ದೇವಿಯನ್ನು ಒಮ್ಮೆ ನೋಡಿದರೂ ಸಾಕು ಬದುಕಿನ ಸರ್ವ ಸಂಕಷ್ಟಗಳು ದೂರ ಆಗುತ್ತೆ. ಈ ಕ್ಷೇತ್ರದಲ್ಲಿ ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನವೂ ದೇವಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಈ ಸಮಯದಲ್ಲಿ ಇಲ್ಲಿ ನಡೆಯುವ ದಾಂಡಿಯಾ ನೃತ್ಯ ಹೆಚ್ವು ಪ್ರಖ್ಯಾತಿ ಆಗಿದೆ. ಇನ್ನೂ ಶ್ರಾವಣ ಮಾಸ ಹಾಗೂ ಯುಗಾದಿ ಹಬ್ಬದಂದು ಇಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ. ಕಾಳಿ ನದಿಯ ಮಧ್ಯದಲ್ಲಿ ಇರುವ ಈ ಸುಂದರವಾದ ದೇವಾಲಯವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ದೇಗುಲಕ್ಕೆ ಬೋಟ್ ಅಥವಾ ರಸ್ತೆ ಮುಖಾಂತರ ಸುಲಭವಾಗಿ ತಲುಪಬಹುದು. ಈ ದೇಗುಲವು ಕಾರವಾರ ಪಟ್ಟಣದಿಂದ ಕೇವಲ 2 ಕಿಮೀ ದೂರದಲ್ಲಿದೆ. ಈ ಆಲಯವು ಬೆಂಗಳೂರಿನಿಂದ 523 ಕಿಮೀ, ಮಂಗಳೂರಿನಿಂದ 273 ಕಿಮೀ, ಶಿವಮೊಗ್ಗದಿಂದ 49 ಕಿಮೀ, ಹುಬ್ಬಳ್ಳಿಯಿಂದ 71 ಕಿಮೀ ದೂರದಲ್ಲಿದೆ. ಕಾರವಾರ ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ಕಾಳಿ ನದಿಯ ಮಧ್ಯದಲ್ಲಿ ನೆಲೆ ನಿಂತ ಸಂತೋಷಿ ಮಾತಾ ದೇವಿಯನ್ನು ಕಣ್ಣು ತುಂಬಿಕೊಂಡು ಧನ್ಯರಾಗಿ. ಶುಭದಿನ.

ಭಕ್ತಿ