ವಾರಕ್ಕೆ ಒಂದೇ ಸಲ ಸ್ಟ್ರಾಬೆರ್ರಿ ಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಸ್ಟ್ರಾಬೆರ್ರಿ ಹಣ್ಣು, ಹಣ್ಣುಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕಬ್ಬಿಣ, ಪೊಟಾಸಿಯಂ, ಮಗ್ನಿಸಿಯಂ, ನಿಯಾಸಿನ್, ಪ್ಯಾಂಟೋತೇನಿಕ್ ಅಂಶಗಳು ಇವೆ. ಇತರ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಅಂದ್ರೆ ಸೇಬು ಹಣ್ಣು ಕಿತ್ತಳೆ ಹಣ್ಣು ಬಾಳೆ ಹಣ್ಣು ಹೀಗೆ ಬೇರೆ ಹಣ್ಣುಗಳಿಗಿಂತ ಸ್ಟ್ರಾಬೆರ್ರಿ ಅಧಿಕ ಪ್ರಮಾಣದ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಹಣ್ಣಿನಲ್ಲಿ ಪ್ರೊಟೀನ್, ವಿಟಮಿನ್, ಅಧಿಕವಾಗಿ ಇರುವುದರಿಂದ ಕೊಬ್ಬನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದಿನ ಲೇಖನದಲ್ಲಿ ಈ ಹಣ್ಣಿನ ಹಲವಾರು ಉಪಯೋಗಗಳನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಹಣ್ಣು ಸೇವನೆ ಮಾಡುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು. ಹೌದು ! ನಮಗೆ ವಯಸ್ಸಾದ ಮೇಲೆ ಕಣ್ಣಿನ ಪೊರೆ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ.

 

 

 

ಹಾಗಾಗಿ ಸ್ಟ್ರಾಬೆರ್ರಿ ಸೇವನೆ ಒಳ್ಳೆಯದು. ಇದರಲ್ಲಿನ ಉತ್ಕರ್ಷಕ ನಿರೋಧಕ ಅಂಶಗಳು ಕಣ್ಣಿನ ಮೇಲೆ ಆಗುವಂತಹ ಪೊರೆಯನ್ನು ನಿವಾರಿಸುತ್ತದೆ. ಇನ್ನೂ ಗರ್ಭಿಣಿಯರು ಸ್ಟ್ರಾಬೆರ್ರಿ ತಿಂದರೆ ಮಗುವಿನ ಆರೋಗ್ಯಕ್ಕೆ ಬೇಕಾದ ಬಿಜಿಯೋ ಸತ್ವ 21 ಮಿಲಿ ಗ್ರಾಂ ಪ್ರಮಾಣದಲ್ಲಿ ಸಿಗುತ್ತದೆ. ಗರ್ಭಿಣಿಯರು ಗರ್ಭಸ್ಥ ಶಿಶುವಿನ ಬೆನ್ನುಹುರಿಯ ಬೆಳವಣಿಗೆ ಹಂತದಲ್ಲಿ ಸಹಾಯ ಮಾಡುತ್ತದೆ ಹಾಗೂ ಜನನ ಸಮಯದಲ್ಲಿ ದೋಷಗಳನ್ನು ತಡೆಯುತ್ತದೆ. ಇನ್ನೂ ಚರ್ಮದ ರಕ್ಷಣೆಯನ್ನು ಸಹ ಮಾಡುತ್ತದೆ. ಇದರಲ್ಲಿ ಇರುವ ವಿಟಮಿನ್ ಸಿ ಚರ್ಮದಲ್ಲಿನ ಸ್ಥಿತಿ ಸ್ಥಪಕತ್ವ ಉಂಟು ಮಾಡಲು ಸಹಾಯ ಮಾಡುತ್ತದೆ. ಇನ್ನೂ ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ತಡೆದು ಪಾರ್ಶ್ವವಾಯು ದೂರವಿಡಲು ಸಮರ್ಥವಾಗಿದೆ. ನಿತ್ಯ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯಕ್ಕೆ ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ. ರಕ್ತ ಪರಿಚಲನೆ ಯನ್ನ ಸುಗಮ ಮಾಡುತ್ತದೆ.

 

 

 

ಇನ್ನೂ ಮೂಳೆ ಮತ್ತು ಹಲ್ಲುಗಳ ಸವೆತವನ್ನು ತೆಡೆಯುವ ಶಕ್ತಿ ಈ ಹಣ್ಣಿಗಿದೇ. ಈ ಹಣ್ಣನ್ನು ತಿಂದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡುತ್ತವೆ. ಇನ್ನೂ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುತ್ತದೆ. ಇನ್ನೂ ವಯಸ್ಸಾದ ನೆಲೆ ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಅಂಥವರು ಸ್ಟ್ರಾಬೆರ್ರಿ ತಿನ್ನುವುದರಿಂದ ಮೈ ಕೈ ನೋವು ಕಡಿಮೆ ಆಗುತ್ತದೆ. ಇನ್ನೂ ದೇಹಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗಿ ಆದರೆ ಹೃದಯದ ಕೆಲಸ ಕಡಿಮೆ ಆಗಿ ಹೃದಯಾಘಾತ ಉಂಟಾಗುತ್ತದೆ. ಸ್ಟ್ರಾಬೆರ್ರಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರ ಆಗಲು ಬಿಡುವುದಿಲ್ಲ. ನೋಡಿದ್ರಲ್ವ ಫ್ರೆಂಡ್ಸ್ ನಿಯಮಿತವಾಗಿ ಸ್ಟ್ರಾಬೆರ್ರಿ ಹಣ್ಣನ್ನು ತಿನ್ನವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published.