ಕೊಲ್ಲೂರಿನ ಮೂಕಾಂಬಿಕೆ ಪಡು ಅಲೆವೂರಿನಲ್ಲಿ ಕೂಡಾ ಉದ್ಭವ ರೂಪಿಯಾಗಿ ನೆಲೆನಿಂತಿದ್ದು ಯಾಕೆ ಗೊತ್ತಾ???

[7:37 pm, 01/05/2022] Choti. H. b. halli. new: ನಮಸ್ತೆ ಪ್ರಿಯ ಓದುಗರೇ, ಮಾತೃ ಶಕ್ತಿ ಸ್ವರೂಪಿಣಿ ಆದ ಜಗನ್ಮಾತೆಯನ್ನು ಅಮ್ಮಾ ಎಂದು ಭಕ್ತಿಯಿಂದ ಕೂಗಿದರೆ ಸಾಕು ಆಕೆ ಓಡೋಡಿ ಬಂದು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುತ್ತಾಳೆ. ಅದ್ರಲ್ಲೂ ಕೊಲ್ಲೂರಿನಲ್ಲಿ ನೆಲೆಸಿರುವ ಮೂಕಾಂಬಿಕಾ ಅಮ್ಮನವರಿಗೆ ಭಕ್ತ ಜನಕ್ಕೆ ಲೆಕ್ಕವೇ ಇಲ್ಲ. ಕೆಲವು ಕೊಲ್ಲೂರಿನಲ್ಲಿ ಮಾತ್ರವಲ್ಲ ಈ ಕ್ಷೇತ್ರದಲ್ಲಿ ಕೂಡ ಕೊಲ್ಲೂರಿನ ಮೂಕಾಂಬಿಕಾ ತಾಯಿ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಅತ್ಯಪರೂಪದ ದೇವಿಯ ದೇಗುಲವನ್ನು ದರ್ಶನ ಮಾಡಿ ಆಕೆಯ ಕೃಪೆಗೆ ಪಾತ್ರರಾಗೊಣ. ಸುಮಾರು 1500 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿ ರೂವ ಪಡು ಅಲೇವೂರಿನ ದುರ್ಗಾ ಪರಮೇಶ್ವರಿ ಅಮ್ಮನವರ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಈ ಕ್ಷೇತ್ರದಲ್ಲಿ ಅಮ್ಮನವರು ಲಿಂಗ ರೂಪದಲ್ಲಿ ಉದ್ಭವ ಆಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾರೆ. ಇಲ್ಲಿ ನೆಲೆಸಿರುವ ದುರ್ಗಾ ಪರಮೇಶ್ವರಿ ಯಾನ್ನೂ ಸಾಕ್ಷಾತ್ ಕೊಲ್ಲೂರು ಮೂಕಾಂಬಿಕೆ ಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಬಹಳ ಹಿಂದೆ ಈ ಊರಿನಲ್ಲಿನ ವ್ಯಕ್ತಿಯೊಬ್ಬರು ಕೊಲ್ಲೂರಿಗೆ ಹೋಗಿ ಅಮ್ಮನವರ ಕುರಿತು ಘೋರವಾದ ತಪ್ಪಸ್ಸನ್ನು ಮಾಡಿದರಂತೆ. ಆಗ ಅವರ ಭಕ್ತಿಗೆ ಮೆಚ್ಚಿ ಮೂಕಾಂಬಿಕೆ ಭಕ್ತ ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೀನೆ. ನೀನು ನಿನ್ನ ಊರಿಗೆ ಹಿಂತಿರುಗಿ ಹೋಗು ನಾನು ಕೂಡ ನಿನ್ನ ಜೊತೆ ಬರುತ್ತೇನೆ ಆದರೆ ಯಾವ ಸ್ಥಳದಲ್ಲಿ ನೀನು ನನ್ನ ಹಿಂದೆ ತಿರುಗಿ ನೋಡಿತ್ತಿಯೋ ಆ ಸ್ಥಳದಲ್ಲಿ ನಾನು ಉದ್ಭವ ಆಗುತ್ತಿನಿ ಎಂದು ಹೇಳಿದಳಂತೆ.

 

 

 

ಈ ವ್ಯಕ್ತಿ ಈ ಊರಿಗೆ ಬರುತ್ತಲೇ ತಾಯಿ ನನ್ನ ಜೊತೆ ಬರುತ್ತಿದ್ದಾಳೋ ಇಲ್ಲವೋ ಎಂದು ಕುತೂಹಲ ತಡೆಯದೆ ತಿರುಗಿ ನೋಡಿದರಂತೆ. ಆಗ ಅಮ್ಮನವರು ಈ ಸ್ಥಳದಲ್ಲಿ ಪಾಣಿ ಪೀಠ ಸಮೇತ ಲಿಂಗ ರೂಪಿಯಾಗಿ ಉದ್ಭವಾಗಿ ನೆಲೆಸಿದಳು ಎಂದು ಇಲ್ಲಿನ ಕ್ಷೇತ್ರ ಮಹಾತ್ಮೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇಲ್ಲಿ ನೆಲೆಸಿರುವ ದುರ್ಗಾ ಪರಮೇಶ್ವರಿ ಯನ್ನ ಕೊಲ್ಲೂರು ಮೂಕಾಂಬಿಕೆ ಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಈ ತಾಯಿಯು ಮಹಾ ಕಾಳಿ,ಮಹಾ ಲಕ್ಷ್ಮೀ, ಮಹಾ ಸರಸ್ವತಿ ರ ಅಂಶವನ್ನು ಹೊಂದಿದ್ದು, ಈ ತಾಯಿಯನ್ನು ನಂಬಿದವರ ಕೈ ಎಂದಿಗೂ ಬಿಟ್ಟಿಲ್ಲ. ಇಲ್ಲಿ ನೆಲೆಸಿರುವ ಅಮ್ಮನವರಿಗೆ ಜಾಜಿ ಮಲ್ಲಿಗೆ ಹೂವು ಎಂದರೆ ಬಲು ಪ್ರಿಯ ಆಗಿದ್ದು, ಈ ಕ್ಷೇತ್ರಕ್ಕೆ ಬಂದು ಅಮ್ಮನವರಿಗೆ ಹೂವಿನ ಪೂಜೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ, ಬಂದ ಕಷ್ಟಗಳು ದೂರವಾಗಿ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಹೂ ಎತ್ತಿದ ರೀತಿಯಲ್ಲಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ವ್ಯವಾಹರಿಕ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಆರ್ಥಿಕ ಸಮಸ್ಯೆ, ಸಂತಾನ ಸಮಸ್ಯೆ ಹೀಗೆ ಏನೇ ಇದ್ದರೂ ಇಲ್ಲಿಗೆ ಬಂದು ಅಮ್ಮನವರಿಗೆ ಪ್ರಿಯವಾದ ಹೂವಿನ ಪೂಜೆ ಮಾಡುತ್ತೇವೆ ಎಂದು ಹರಕೆ ಹೊತ್ತರೆ ಸಮಸ್ಯೆಗಳು ದೂರ ಆಗುತ್ತವೆ ಎನ್ನುವುದು ಈ ದೇವಿಯನ್ನು ನಂಬಿ ಬದುಕಿನಲ್ಲಿ ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ಅಲ್ಲದೆ ಸಾಕಷ್ಟು ಜನರು ತ್ ಇಷ್ಟಾರ್ಥ ಸಿದ್ಧಿಗಾಗಿ ಚಂಡಿಕಾ ಹೋಮ ಮಾಡಿಸುವುದಾಗಿ ಹರಕೆ ಹೊರುತ್ತಾರೆ. ಸಾಮಾನ್ಯವಾಗಿ ಕಲ್ಲುಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತವೆ ಎಂಬ ವಿಷಯ ನಮಗೆ ಗೊತ್ತಿದೆ, ಆದ್ರೆ ಈ ಕ್ಷೇತ್ರದಲ್ಲಿ ಬೃಹದಾಕಾರದ ಕಲ್ಲು ಇದ್ದು, ಇದು ವರ್ಷದಿಂದ ವರ್ಷಕ್ಕೆ ಬೆಳೆಯುವುದಿಲ್ಲ, ಬದಲಾಗಿ ಕುಗ್ಗುತ್ತಾ ಹೋಗುತ್ತದೆ.

 

 

 

ಈ ಕಲ್ಲನ್ನು ದುರ್ಗಾ ಪರಮೇಶ್ವರಿ ಅಮ್ಮನವರ ವಾಹನದ ಪ್ರತಿರೂಪ ಎಂದು ಹೇಳಲಾಗುತ್ತದೆ. ಈ ಕಲ್ಲಿಗೆ ಪೂಜೆ ನಡೆಯುತ್ತದೆ. ಬಹಳ ಹಿಂದೆ ಈ ಕಲ್ಲನ್ನು ಸರಿಸಿ ಬೇರೆ ಜಾಗದಲ್ಲಿ ಇಡಬೇಕು ಅಂದುಕೊಂಡು ಗ್ರಾಮದ ಜನರು ಕಲ್ಲನ್ನು ಅಲುಗಾಡಿಸಲು ಪ್ರಾರಂಭಿಸಿದಾಗ ಕಲ್ಲಿನಲ್ಲಿ ರಕ್ತ ಬಂದಿತು, ನಂತರ ದೇವಿಯಲ್ಲಿ ತಪ್ಪಾಯಿತು ಎಂದು ಕ್ಷಮೆ ಕೇಳಿದಾಗ ಕಲ್ಲಿನಿಂದ ರಕ್ತ ಬರುವುದು ನಿಂತಿತು ಎಂದು ಹೇಳಲಾಗುತ್ತದೆ.  ಇಲ್ಲಿ ನಡೆಯುವ ಹೂವಿನ ಪೂಜೆಯು ಅನೇಕ ವಿಶೇಷತೆಗಳಿಂದ ಕೂಡಿದ್ದು, ಅಮ್ಮನವರ ಪೂಜೆಗೆ ಒಂದು ಲಕ್ಷ ಜಾಜಿ ಅಥವಾ ಒಂದು ಲಕ್ಷ ಮಲ್ಲಿಗೆ ಹೂವನ್ನು ಸಲ್ಲಿಸಬೇಕಾಗುತ್ತದೆ. ಒಂದು ಲಕ್ಷದಷ್ಟು ಹೂವನ್ನು ಬಳಸಿ ಶುಕ್ರವಾರ ಹಾಗೂ ಸೋನೆ ತಿಂಗಳಿನಲ್ಲಿ ಅಮ್ಮನವರಿಗೆ ಹೂವಿನ ಪೂಜೆಯನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಸರ್ವಾಲಂಕೃತ್ತ ಭೋಶೀತೇ ಆದ ಅಮ್ಮನವರನ್ನು ನೋಡುವುದೇ ಒಂದು ದಿವ್ಯ ಅನುಭೋತಿ ಆಗಿದ್ದು, ನಿತ್ಯ ಈ ಕ್ಷೇತ್ರಕ್ಕೆ ಉಡುಪಿ ಕುಂದಾಪುರ ಮಾತ್ರವಲ್ಲ ಮಂಗಳೂರು, ಕೇರಳ ಇಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಸೌರಮಾನ ಯುಗಾದಿಯ ನಂತರ 5 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಕಾರ್ತಿಕ ದೀಪೋತ್ಸವ ನೆರವೇರಿಸುವುದು ಜೊತೆಗೆ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತದೆ. ಮಂಗಳವಾರ ಶುಕ್ರವಾರ ಬಲು ಪ್ರಿಯವಾದ ದಿನಗಳಾಗಿವೆ. ಅತ್ಯಂತ ಶಕ್ತಿಶಾಲಿ ಆದ ಈ ದೇವಿಯನ್ನು ನಿತ್ಯ ಬೆಳಿಗ್ಗೆ 6 ರಿಂದ ಸಂಜೆ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಕುಂಕುಮಾರ್ಚನೆ, ಉಡಿ ಸೇವೆ, ಹೂವಿನ ಸೇವೆ, ಚಂಡಿಕಾ ಹೋಮ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ತಾಯಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಪಡು ಅಲೆವೂರು ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಿಯನ್ನು ಪೂಜಿಸಿ ಅವಳ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

Leave a comment

Your email address will not be published.