ನಮಸ್ತೆ ಪ್ರಿಯ ಓದುಗರೇ, ಓಟ್ಸ್ ಇತ್ತೀಚಿನ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಸೇವನೆ ಮಾಡುತ್ತಾ ಇದ್ದಾರೆ. ಬಹಳಷ್ಟು ಜನರಿಗೆ ಅಷ್ಟೊಂದು ಅರಿವಿಲ್ಲ. ಹಾಗಾಗಿ ಇದರ ಬಗ್ಗೆ ಇಂದಿನ ಲೇಖನದಲ್ಲಿ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಪ್ರತಿನಿತ್ಯ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳು ಈ ಓಟ್ಸ್ ಅಲ್ಲಿದೆ. ಬೆಳಗಿನ ಉಪಹಾರ ಓಟ್ಸ್ ಜೊತೆ ಪ್ರಾರಂಭಿಸಿದರೆ ದೇಹಕ್ಕೆ ತುಂಬಾ ಒಳ್ಳೆಯದು. ದೇಹಕ್ಕೆ ನಾರಿನ ಅಂಶವನ್ನು ಅಧಿಕವಿದ್ದು, ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಓಟ್ಸ್ ತಿನ್ನುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಪ್ರೊಟೀನ್ ಸಿಗುತ್ತದೆ. ಇದರಲ್ಲಿ ಇರುವ ವಿಟಮಿನ್ ಇ ಹಾಗೂ ಕಾರ್ಬೋಹೈಡ್ರೇಟ್ ಶಕ್ತಿಯಾಗಿ ಪರಿವರ್ತನೆ ಆಗುತ್ತದೆ. ಓಟ್ಸ್ ಅಲ್ಲಿ ಆಂಟಿ ಆಕ್ಸಿಡೆಂಟ್ ಅಧಿಕವಾಗಿ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಲಬದ್ದತೆ ಸಮಸ್ಯೆ ಬರುವುದಿಲ್ಲ. ಒಂದುವೇಳೆ ಬಂದರೂ ಒಟ್ಸ್ ತಿನ್ನುವುದರಿಂದ ಅದರಲ್ಲಿರುವ ಫೈಬರ್ ಅಂಶ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯದು ಓಟ್ಸ್. ಕರಗಬಲ್ಲ ನಾರಿನ ಅಂಶ ಹೊಂದಿರುವ ಓಟ್ಸ್ ಮೀಲ್ಸ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಓಟ್ಸ್ ಆರೋಗ್ಯಕರ ಕೊಬ್ಬಿನ ಅಂಶ ಉತ್ತಮ ಪ್ರಮಾಣದಲ್ಲಿ ಇದೆ. ಇದರಿಂದ ಹೃದಯದ ಕೋಶವು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಲು ನೆರವಾಗುತ್ತದೆ. ಇನ್ನೂ ನಿಮ್ಮ ಕಾಲಿನ ಹಿಮ್ಮಡಿ ಓದೆದಿದಿಯ? ಇದಕ್ಕೆ ತುಂಬಾ ಸಿಂಪಲ್ ಟಿಪ್ಸ್ ಫಾಲೋ ಮಾಡಿ. ಒಂದು ಚಮಚ ಓಟ್ಸ್ ಗೆ ಆಲಿವ್ ಎಣ್ಣೆ ಬೆರಕೆ ಮಾಡಿ ದಿನಾ ರಾತ್ರಿ ಒಡೆದ ಹಿಮ್ಮಡಿ ಗೆ ಹಚ್ಚಿದರೆ ಹಿಮ್ಮಡಿ ಬಿರುಕು ಮುಚ್ಚಿ ನುಣುಪಾಗುತ್ತದೆ. ಇನ್ನೂ ಓಟ್ಸ್ ಮೀಲ್ಸ್ ಅಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್, ಪ್ರೊಟೀನ್ ಇರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ವ್ಯಾಯಾಮ ಅಥವಾ ಜಿಮ್ ಮಾಡುವವರಿಗೆ ತುಂಬಾ ಒಳ್ಳೆಯದು. ವ್ಯಾಯಾಮ ಅಥವಾ ಜಿಮ್ ಮಾಡುವವರು ಕಡಿಮೆ ಗ್ಲೂಕೋಸ್ ಇರುವಂಥ ಆಹಾರವನ್ನು ಮಾಡಬೇಕು. ಅಂತಹ ಆಹಾರವೇ ಈ ಓಟ್ಸ್. ಓಟ್ಸ್ ಸೇವನೆ ಮಾಡಿದರೆ ಅದು ನಿಮಗೆ ಹೆಚ್ಚಿನ ಸಹಿಷ್ಣುತೆ ನೀಡುವುದು. ಗ್ಲೈಸೇಮಿಕ್ ಅಂಶ ಕಡಿಮೆ ಆಗುವಂತೆ ಓಟ್ಸ್ ಮೀಲ್ ಮಾಡುತ್ತದೆ.
ಕಾರ್ಬೋಹೈಡ್ರೇಟ್ ಸಂಕೀರ್ಣವೂ ದೇಹಕ್ಕೆ ಅಧಿಕ ಶಕ್ತಿ ಒದಗಿಸಿ ಸ್ನಾಯುಗಳಿಗೆ ಬೇಕಾದ ಶಕ್ತಿ ಒದಗಿಸುತ್ತದೆ. ಇನ್ನೂ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುವವರು ಇದು ತುಂಬಾ ಒಳ್ಳೆಯದು. ಹೌದು ! ನಿಮ್ಮ ದೇಹದ ತೂಕಕ್ಕೆ ಇದು ಉತ್ತಮ ಆಹಾರ. ಸ್ವಲ್ಪ ಓಟ್ಸ್ ತಿಂದರೆ ಸಾಕು, ಹೊಟ್ಟೆ ತುಂಬಿದ ಹಾಗೆ ಆಗುತ್ತದೆ. ಇದರಲ್ಲಿರುವ ಕಬ್ಬಿಣ, ಮಗ್ನೆಸಿಯಮ್ ದೇಹಕ್ಕೆ ಹೆಚ್ಚು ಕ್ಯಾಲೋರಿ ನೀಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಆಗುತ್ತದೆ. ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಈ ಓಟ್ಸ್ ಅಲ್ಲಿದೆ. ನಮ್ಮ ದೇಹಕ್ಕೆ ನಾರಿನ ಅಂಶ ಅಗತ್ಯವಾಗಿ ಬೇಕಾಗುತ್ತದೆ. ಹಾಗಾಗಿ ಕರಗಬಲ್ಲ ನಾರಿನ ಅಂಶ ಇರುವ ಓಟ್ಸ್ ಮೀಲ್ ಆಹಾರ ದೇಹದ ಕಲ್ಮಶ ಹೊರ ಹಾಕಲು ನೆರವಾಗುತ್ತದೆ. ಕರಗಬಲ್ಲ ನಾರಿನ ಅಂಶ ನೀರಿನಲ್ಲಿ ಕರಗಿ ಹೊಟ್ಟೆ ಖಾಲಿಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಅಧಿಕ ಕಾಲದ ತನಕ ಹೊಟ್ಟೆ ತುಂಬಿದ ಹಾಗೆ ಅನಿಸುತ್ತದೆ. ಕರಗಬಲ್ಲ ನಾರಿನ ಅಂಶವು ಮಲಬದ್ದತೆ ನಿವಾರಿಸಿ ಕರುಳಿನ ಕ್ಯಾನ್ಸರ್ ಬರದಂತೆ ತಡೆಯಲು ಸಹಾಯ ಮಾಡುತ್ತದೆ. ನೋಡಿದ್ರಲ್ವ ಫ್ರೆಂಡ್ಸ್ ನಿಯಮಿತವಾಗಿ ಓಟ್ಸ್ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳು ಇವೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.