ಈ ಬೆಟ್ಟದಲ್ಲಿ ಇದೆ ಏಕಶಿಲಾ ಬೃಹತ್ ಗಣೇಶನ ವಿಗ್ರಹ..!!!

ಈ ಬೆಟ್ಟದಲ್ಲಿ ಇದೆ ಏಕಶಿಲಾ ಬೃಹತ್ ಗಣೇಶನ ವಿಗ್ರಹ..!!!

ನಮಸ್ತೆ ಪ್ರಿಯ ಓದುಗರೇ, ಮಹಾಭಾರತ ಎನ್ನುವ ಕಾವ್ಯ ಕೇವಲ ಧರ್ಮಗ್ರಂಥ ಅಲ್ಲ. ಇದರಲ್ಲಿ ನಮಗೆ ನಿತ್ಯ ಬೇಕಾದ ಅನೇಕ ಉತ್ತಮ ಅಂಶಗಳಿವೆ. ಅಲ್ಲದೆ ಮಹಾಭಾರತದ ಘಟನೆಗಳು, ನಡೆದ ಸ್ಥಳಗಳ ಬಗ್ಗೆ ಇಂದಿಗೂ ದೊರಕುತ್ತವೆ. ರಾಜ್ಯವಾಳುತ್ತಿದ್ದ ಪಾಂಡವರು ವನವಾಸಕ್ಕೆ ಎಂದು ಅದೆಷ್ಟೋ ರಾಜ್ಯಗಳಿಗೆ ಸಂಚರಿಸಿದ್ದಾರೆ, ಆ ರಾಜ್ಯಗಳ ಪೈಕಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ನಾವು ಪಾಂಡವರು ಒದಾಡಿದ್ದ ಗುರುತುಗಳನ್ನು ಕಾಣಬಹುದು. ಬನ್ನಿ ಇವತ್ತಿನ ಲೇಖನದಲ್ಲಿ ಪಾಂಡವರ ಪಾದ ಸ್ಪರ್ಶದಿಂದ ಪುನೀತ ಆದ ಬೆಟ್ಟವೊಂದರ ಸುತ್ತು ಹಾಕಿಕೊಂಡು ಬರೋಣ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಕುಂತಿ ಬೆಟ್ಟ ಒನಕೆ ಬೆಟ್ಟ ಎಂಬ ಅವಳಿ ಬೆಟ್ಟಗಳ ಸಾಲುಗಳು ಇದ್ದು, ಈ ಬೆಟ್ಟಗಳು ಸಮುದ್ರ ಮಟ್ಟದಿಂದ 2882 ಅಡಿಗಳಷ್ಟು ಎತ್ತರವಾಗಿ ಇವೆ ಎಂದು ಅಂದಾಜಿಸಲಾಗಿದೆ. ಮಹಾಭಾರತದ ಕಾಲದಲ್ಲಿ ವನವಾಸಕ್ಕೆ ಎಂದು ಪಾಂಡವರು ಊರನ್ನು ಸಂಚರಿಸುತ್ತಾ ಬಂದು ಈ ಬೆಟ್ಟದ ಮೇಲೆ ವಾಸವಾಗಿದ್ದರು ಎಂದು ಪ್ರತೀತಿ ಮೇಲೆ ಕುಂತಿ ವಾಸವಾಗಿದ್ದ ಬೆಟ್ಟವನ್ನು ಕುಂತಿ ಬೆಟ್ಟ ಎಂದು, ಕುಂತಿಯು ಭಿಕ್ಷೆ ಬೇಡಿ ಬಂದ ಭತ್ತವನ್ನು ಕಲ್ಲಿನ ಒನಕೆಯಿಂದ ಕುಟ್ಟುತ್ತಿದ್ದ ಬೆಟ್ಟವನ್ನು ಒನಕೆ ಬೆಟ್ಟ ಎಂದು ಕರೆಯಲಾಗುತ್ತದೆ.

 

 

 

ಇಂದಿಗೂ ನಾವು ಬೆಟ್ಟದ ತುತ್ತ ತುದಿಯಲ್ಲಿ ಇರುವ ಒನಕೆಯನ್ನು ನೋಡಬಹುದು. ಬೆಟ್ಟದ ಮೇಲೆ ನಿಂತು ಭತ್ತದ ಗದ್ದೆಗಳನ್ನು ಪಾಂಡವಪುರ, ಕರಿಘಟ್ಟ, ಕಿಲುಕೋಟೆ ಬೆಟ್ಟ, ಕಿರೋಡಿ ಕೆರೆ ಹಾಗೂ ಸುತ್ತ ಮುತ್ತಲಿನ ಸುಂದರವಾದ ಪ್ರದೇಶಗಳನ್ನು ಕೂಡ ಅಕ್ಷಿ ಪಟಲಗಳಲ್ಲಿ ಸೆರೆ ಹಿಡಿಯಬಹುದು. ಇನ್ನೂ ಬೆಟ್ಟದ ಬುಡ ಭಾಗದಲ್ಲಿ ಕುಂತಿ ಮತ್ತು ಒನಕೆ ಬೆಟ್ಟಕ್ಕೆ ತಲುಪಲು ಮೆಟ್ಟಿಲುಗಳ ವ್ಯವಸ್ಥೆ ಇದ್ದು, ನೂರು ಮೆಟ್ಟಿಲುಗಳನ್ನು ಹತ್ತಿ ಬಂದರೆ ಪುರಾತನವಾದ ಮಲ್ಲಿಕಾರ್ಜುನನ ಗುಡಿಯನ್ನು ಕಣ್ಣು ತುಂಬಿಕೊಳ್ಳಬಹುದು. ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿಗೆ ನಮಿಸಿ ಹೋಗುವ ಪರಿ ಪಾಠವಿದ್ದು, ಆಲಯವನ್ನು ಸ್ವಲ್ಪ ವರ್ಷಗಳ ಹಿಂದೆ ನವೀಕರಿಸಲಾಗಿದೆ. ಅಲ್ಲದೆ ದೇವಾಲಯದ ಮುಂಭಾಗದಲ್ಲಿ ಸುಂದರವಾದ ಕಲ್ಯಾಣಿ ಇದ್ದು, ಈ ಕಲ್ಯಾಣಿಯಲ್ಲಿ ಪಾಂಡವರು ಸ್ನಾನ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ. ಅತ್ಯಂತ ಸುಂದರವಾದ ಪ್ರದೇಶವನ್ನು ಹೊಂದಿರುವ ಬೆಟ್ಟದ ಬುಡದ ಭಾಗದಲ್ಲಿ ಏಕಶಿಕೆಯಲ್ಲಿ ಕೆತ್ತಿದ ನಂದಿಯ ವಿಗ್ರಹವಿದೆ. ನಂದಿಯ ಕೊರಳಿನಲ್ಲಿ ಗೆಜ್ಜೆಯ ಮಾಲೆಗಳನ್ನು ಕೆತ್ತಿಸಲಾಗಿದೆ. ಕಲ್ಲಿನಿಂದ ಕೆತ್ತಿ ರುವಾ ಈ ನಂದಿಯ ವಿಗ್ರಹಕ್ಕೆ ಬಣ್ಣವನ್ನು ಬಲಿಯಲಾಗಿದ್ದು, ನೋಡಲು ತುಂಬಾ ಆಕರ್ಷಕವಾಗಿ ಇದೆ. ಅಲ್ಲದೆ ಇಲ್ಲಿನ ಕಲ್ಲೊಂದು ಮೇಲೆ ಸುಮಾರು 15 ಅಡಿ ಎತ್ತರದ ಏಕಶಿಲಾ ಗಣೇಶನ ವಿಗ್ರಹ ಕೆತ್ತಲಾಗಿದೆ. ಗಣೇಶನ ವಿಗ್ರಹ ದ ಕೆಳಭಾಗದಲ್ಲಿ ಮೂಷಿಕನನ್ನು ಕೆತ್ತಲಾಗಿದೆ.

 

 

 

ದೇವಾಲಯದ ಮುಂಭಾಗದಲ್ಲಿ ಇರುವ ಕಲ್ಲಿನ ಮಂಟಪಗಳು ಉತ್ಸವ ಮಂಟಪಗಳನ್ನು ಸಹ ನಾವು ಈ ಸ್ಥಳಕ್ಕೆ ಹೋದರೆ ಕಣ್ಣು ತುಂಬಿಕೊಳ್ಳಬಹುದು. ಬೆಟ್ಟವನ್ನು ಏರಲು ಇಚ್ಛಿಸುವವರು ಬಾಣದ ಗುರುತನ್ನು ಅನುಸರಿಸಿ ಎರಬೇಕಾಗುತ್ತದೆ. ಬೆಟ್ಟದ ಮೇಲೆ ಪುಟ್ಟದಾದ ನೀರಿನ ಕೊಳ ಇದ್ದು, ಇದನ್ನು ಕುಂತಿ ಕೊಳ ಎಂದು ಹೇಳಲಾಗುತ್ತದೆ. ಎಷ್ಟೇ ಬಿರು ಬೇಸಿಗೆ ಇದ್ರೂ ಈ ಕೊಳದ ನೀರು ಬತ್ತುವುದಿಲ್ಲ, ಅಲ್ಲದೆ ಈ ನೀರಿಗೆ ಔಷಧೀಯ ಗುಣಗಳು ಇದ್ದು, ಈ ನೀರನ್ನು ಪ್ರೋಕ್ಷಿಸಿಕೊಂದರೆ ಚರ್ಮ ರೋಗಗಳು ವಾಸಿ ಆಗುತ್ತೆ ಎಂದು ಹೇಳಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಇಲ್ಲಿನ ಕಲ್ಲು ಬಂಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆ ಕಲ್ಲುಗಳು ವಿವಿಧ ಪ್ರಾಣಿಗಳ ಮುಖದಂತೆ ಗೋಚರವಾಗುತ್ತದೆ. ಜಿಂಕೆ, ಮೊಲ, ತೊಳದಂತೆ ಕಾಣುವ ಕಲ್ಲುಗಳು, ಮೊಸಳೆ ಆಕಾರದ ಕಲ್ಲುಗಳು ನಮಗೆ ನೋಡಲು ಸಿಗುತ್ತವೆ. ಅತ್ಯಂತ ಸುಂದರವಾದ ವಾತಾವರಣವನ್ನು ಹೊಂದಿರುವ ಕುಂತಿ ಬೆಟ್ಟಕ್ಕೆ ಭೇಟಿ ಇಟ್ಟರೆ, ಬದುಕಿನ ಜಂಜಾಟಗಳ ಕ್ಷಣ ಕಾಲ ದೂರವಾಗುತ್ತವೆ. ಧಾರ್ಮಿಕ ಐತಿಹಾಸಿಕ ಮಹತ್ವವನ್ನು ಹೊಂದಿರುವ ಕುಂತಿ ಬೆಟ್ಟವನ್ನು ದಿನದ 24 ಗಂಟೆ ಯಾವ ಸಮಯದಲ್ಲಿ ಬೇಕಾದರೂ ಏರಬಹುದು. ರಾತ್ರಿ ಹೊತ್ತು ಕೂಡ ಬೆಟ್ಟಕ್ಕೆ ಚಾರಣವನ್ನು ಕೈಗೊಳ್ಳಬಹುದು. ಆದರೆ ಈ ರೀತಿ ಚಾರಣ ಮಾಡುವಾಗ ಸೂಕ್ತವಾದ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಅಲ್ಲದೆ ಮಳೆ ಗಾಲದಲ್ಲಿ ಇಲ್ಲಿನ ಕಲ್ಲು ಬಂಡೆಗಳು ಜಾರುವುದರಿಂದ ಸ್ಪೆಪ್ಟಂಬರ್ ಡಿಸೆಂಬರ್ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಪ್ರವಾಸಿಗಳ ಸ್ವರ್ಗ ಎಂದೇ ಕರೆಯುವ ಕುಂತಿ ಬೆಟ್ಟ ಒನಕೆ ಬೆಟ್ಟ ಎಂಬ ಈ ಸುಂದರವಾದ ಬೆಟ್ಟಗಳು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಮಹಾಭಾರತದ ಕುರುಹನ್ನು ಹೊಂದಿರುವ ಬೆಟ್ಟವನ್ನು ಕಣ್ಣು ತುಂಬಿಕೊಂಡು ಬನ್ನಿ. ಶುಭದಿನ.

ಭಕ್ತಿ