ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಚಿಕ್ಕ ಮಕ್ಕಳಿಗೆ ಸೇಬು ಹಣ್ಣನ್ನು ಅಂದ್ರೆ 6 ತಿಂಗಳಿನಿಂದ 1 ವರ್ಷದ ಒಳಗಿನ ಮಕ್ಕಳಿಗೆ ಸೇಬು ಹಣ್ಣನ್ನು ಯಾವ ರೀತಿ ಕೊಡಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಚಿಕ್ಕ ಮಕ್ಕಳಿಗೆ ಸೇಬು ಹಣ್ಣನ್ನು ನೇರವಾಗಿ ಕೊಡಲು ಬರುವುದಿಲ್ಲ. ಹಾಗಾಗಿ ನಾವು ಅವರಿಗೆ ಪ್ಯುರಿ ತರಹ ಮಾಡಿ ಕೊಡಬೇಕಾಗುತ್ತದೆ. ಈ ಸೇಬು ಹಣ್ಣಿನ ಜ್ಯೂಸ್ ಅನ್ನು ಯಾವ ರೀತಿ ತಯಾರು ಮಾಡಬಹುದು ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಮೊದಲಿಗೆ ಒಂದು ಸೇಬು ಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಮೊದಲು ಉದ್ದವಾಗಿ ಕತ್ತರಿಸಿ ನಂತರ ಮಧ್ಯ ಮಧ್ಯ ಕತ್ತರಿಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ನಂತರ ಇದರ ಮೇಲಿರುವ ಸಿಪ್ಪೆಯನ್ನು ತೆಗೆಯಿರಿ. ಈ ಸಿಪ್ಪೆಯನ್ನು ತೆಗೆದ ನಂತರ ಹಣ್ಣನ್ನು ಇನ್ನೂ ಚಿಕ್ಕದಾಗಿ ಕತ್ತರಿಸಿ.
ನಂತರ ಇದನ್ನು ಬೆಯಿಸ್ಬೇಕಾಗುತ್ತದೆ. ಇದನ್ನು ಹಾಗೆ ಮಿಕ್ಸಿ ಗೆ ಹಾಕಲು ಬರುವುದಿಲ್ಲ. ಏಕೆಂದರೆ ಇದು ಗಟ್ಟಿಯಾಗಿ ಇರುತ್ತದೆ. ಹಾಗಾಗಿ ಮಕ್ಕಳಿಗೆ ಜೀರ್ಣ ಆಗಲು ಕಷ್ಟ ಆಗುತ್ತದೆ. ಹಾಗಾಗಿ ಇದನ್ನು ಬೇಯಿಸಿ ನಂತರ ಮಿಕ್ಸಿಗೆ ಹಾಕಿಕೊಳ್ಳಬೇಕು. ಇದನ್ನು ಯಾವ ರೀತಿ ಬೇಯಿಸಬೇಕು ಎಂದು ನೋಡುವುದಾದರೆ, ನೀವು ಯಾವ ರೀತಿ ಆಲೂಗಡ್ಡೆಯನ್ನು ಬೆಯಿಸುತ್ತಿರಿ ಇದನ್ನು ಸಹ ಅದೇ ರೀತಿ ಮೆತ್ತಗೆ ಬೇಯಿಸಬೇಕು. ಅಂದ್ರೆ ಒಂದು ಚಿಕ್ಕ ಬಟ್ಟಲಿನಲ್ಲಿ ಈಗ ಕತ್ತರಿಸಿ ಇಟ್ಟಂತಹ ಸೇಬು ಹಣ್ಣಿನ ಚೂರುಗಳನ್ನು ಹಾಕಿ ಅದಕ್ಕಿಂತ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕುಕ್ಕರ್ ಕೆಳಗೆ ಹಾಕುವ ಸ್ಟ್ಯಾಂಡ್ ಇಟ್ಟು ಈ ಹಣ್ಣಿನ ಬಟ್ಟಲನ್ನು ಇಟ್ಟು ಆ ಪಾತ್ರೆಯ ಮುಚ್ಚಳ ಮುಚ್ಚಿ. 10-15 ನಿಮಿಷಗಳ ಕಾಲ ಬೇಯಿಸಿ, ನಂತರ ಇದು ಬೆಂದಿದೆ ಎಂದ ತಕ್ಷಣ ರುಬ್ಬಲು ಹೋಗಬೇಡಿ, ಇದು 5-10 ನಿಮಿಷ ಕಾದು ಅದು ತಣ್ಣಗಾದ ಮೇಲೆ ಮಿಕ್ಸಿ ಮಾಡಬಹುದು.
ಬೇಗ ತಣ್ಣಗಾಗಲು ಈ ಬಟ್ಟಲನ್ನು ತಣ್ಣೀರಿನ ಪಾತ್ರೆಯಲ್ಲಿ ಇಡಬಹುದು. ಸ್ನೇಹಿತರೆ ನೀವು ಮಕ್ಕಳಿಗೆ ಸೇಬು ಹಣ್ಣನ್ನು ತಿನ್ನಿಸುವುದು ತುಂಬಾ ಒಳ್ಳೆಯದು ಯಾಕೆ ಅಂದ್ರೆ ಇದರಿಂದ ಎಲ್ಲಾ ವಿಟಮಿನ್ಸ್ ಅವರಿಗೆ ಸಿಗುತ್ತವೆ. ಮಲಬದ್ದತೆ ಸಮಸ್ಯೆ ಒಂದುವೇಳೆ ನಿಮ್ಮ ಮಕ್ಕಳಲ್ಲಿ ಇದ್ದರೆ, ಅದು ಸಹ ನಿವಾರಣೆ ಆಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯಕ್ಕೆ ಮತ್ತು ಅವರ ಬೆಳವಣಿಗೆಗೆ ಸೇಬು ಹಣ್ಣು ತುಂಬಾನೇ ಒಳ್ಳೆಯದು. ಹಣ್ಣಿನ ಚೂರುಗಳು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿದರೆ ಆಯ್ತು ನಮ್ಮ ಸೇಬು ಹಣ್ಣಿನ ಜ್ಯೂಸ್ ಅಥವಾ ಪ್ಯೂರಿ ರೆಡಿ ಆದಂತೆ. ಈಗ ತಯಾರಿಸಿದ ಪ್ಯೂರೀ ಗಟ್ಟಿ ಅನಿಸಿದರೆ ಸ್ವಲ್ಪ ನೀರು ಸೇರಿಸಿ ಕಲಸಿ ತಿನ್ನಿಸಿದರೆ ಆಯ್ತು. ನೋಡಿದ್ರಲ್ವ ಸ್ನೇಹಿತರೆ ಚಿಕ್ಕ ಮಕ್ಕಳಿಗೆ ಎಷ್ಟು ಸುಲಭವಾಗಿ ಹಣ್ಣನ್ನು ಒಳ್ಳೆ ರೀತಿಯಲ್ಲಿ ತಿನ್ನಿಸುವುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.