ಶತಾವರಿಗೆ ಎಷ್ಟೆಲ್ಲಾ ಕಾಯಿಲೆಗಳನ್ನು ನಿವಾರಣೆ ಮಾಡುವಂಥ ಶಕ್ತಿ ಇದೆ ಗೊತ್ತಾ?

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಶತಾವರಿ ಸಸ್ಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಶತಾವರಿ ಸಸ್ಯದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಇವೆ. ಅವುಗಳನ್ನು ಹೇಗೆ ಉಪಯೋಗ ಮಾಡಿಕೊಳ್ಳಬಹುದು ಎಂದು ನೋಡೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ಆಯುರ್ವೇದದಲ್ಲಿ ಸಾಮಾನ್ಯವಾಗಿ ಎಲ್ಲ ಕಾಯಿಲೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಅದರಲ್ಲಿ ಸಂಪೂರ್ಣ ಗುಡ್ ಮೂಲಿಕೆಗಳಿಂದ ಕೂಡಿದ ಆಯುರ್ವೇದ ಔಷಧಿಗಳು ಇಂದಿನ ದಿನಗಳಲ್ಲಿ ಹೆಚ್ಚಿನ ಪ್ರಭಾವ ಇದೆ. ಶತಾವರಿ ಅಂತಹ ಮೂಲಿಕೆಗಳು ಎಲ್ಲಾ ಅರೋಗ್ಯದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು. ಇನ್ನೂ ಶತಾವರಿ ಬಗ್ಗೆ ಹೇಳುವುದಾದರೆ ಶತಾವರಿ ಒಂದು ಔಷಧೀಯ ಸಸ್ಯ ಆಗಿದ್ದು, ಹೆಸರೇ ಹೇಳುವಂತೆ ನೂರು ಬೇರುಗಳ ಒಂದು ಸಸ್ಯವಾಗಿದೆ. ಹಾಗೆ ಈ ಶತಾವರಿ ಸಸ್ಯಕ್ಕೆ ನೂರು ಮಕ್ಕಳ ತಾಯಿ ಎಂದು ಹೇಳಲಾಗುತ್ತದೆ. ಭೂಮಿ ಒಳಗಡೆ ಗದ್ದೆಗಳು ಬೆಳೆಯುವ ಮಾದರಿಯಲ್ಲಿ ಇದು ಬೆಳೆಯುತ್ತದೆ. ಹೆಚ್ಚಾಗಿ ಕಾಡಲ್ಲಿ ಈ ಬೆಳೆ ಬೆಳೆಯುತ್ತಾರೆ. ಇದು ಭೂಮಿಯಲ್ಲಿ ಕೂಡ ಬೆಳೆಯಬಲ್ಲದು. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನ ಇದೆ. ಇನ್ನೂ ಈ ಗಿಡಕ್ಕೆ ಯಾವೆಲ್ಲ ಕಾಯಿಲೆಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ ಎಂದು ನೋಡುವುದಾದರೆ, ಮೊದಲನೆಯದಾಗಿ ಇದರಲ್ಲಿನ ಪೌಷ್ಟಿಕಾಂಶಗಳನ್ನು ನೋಡುವುದಾದರೆ, ಶತಾವರಿ ಅಲ್ಲಿ ಕ್ಯಾಲೋರಿಗಳ ಪ್ರಮಾಣ ಕಡಿಮೆ ಇದ್ದು, ಇದು ಕೊಲೆಸ್ಟ್ರಾಲ್ ನ್ನೂ ಇದು ಹೊಂದಿಲ್ಲ. ಸೋಡಿಯಂ ತುಂಬಾ ಕಡಿಮೆ ಇರುವುದರಿಂದ ಶತಾವರಿ ತುಂಬಾ ಆರೋಗ್ಯಕರ. ಹಾಗೂ ಇದರಲ್ಲಿ ಫೋಲಿಕ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಏ, ವಿಟಮಿನ್ ಕೆ, ಕಬ್ಬಿಣ, ರಂಜಕ ಮುಂತಾದ ಪೌಷ್ಟಿಕಾಂಶಗಳು ಶತಾವರಿಯಲ್ಲಿ ಹೇರಳವಾಗಿ ಇವೆ ಎಂದು ಹೇಳಲಾಗುತ್ತದೆ.

 

 

ಇನ್ನೂ ಶತಾವರಿಯನ್ನು ಯಾವೆಲ್ಲ ಅನಾರೋಗ್ಯದ ಸಮಸ್ಯೆಗಳಿಗೆ ಉಪಯೋಗ ಮಾಡುತ್ತಾರೆ ಎಂದು ನೋಡುವುದಾದರೆ, ಯಾರಿಗೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ, ವೀರ್ಯಾಣುಗಳ ವೃದ್ಧಿಗಾಗಿ ಇದನ್ನು ಉಪಯೋಗ ಮಾಡುತ್ತಾರೆ. ಅದಕ್ಕಾಗಿ ಶತಾವರಿ ಚೂರ್ಣವನ್ನು ತಯಾರು ಮಾಡಬೇಕು. ಶತಾವರಿ ಚೂರ್ಣ, ಜೇಷ್ಠ ಮಧು ಚೂರ್ಣ ಮತ್ತು ಅಶ್ವಗಂಧ ದ ಚೂರ್ಣಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪ್ರತಿದಿನ ಒಂದು ಚಮಚ ಜೇನಿನೊಂದಿಗೆ ಬೆರೆಸಿ ಹಾಲನ್ನು ಕುಡಿಯುತ್ತಾ ಬಂದರೆ, ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಳು ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲದೇ ಈ ಶತಾವರಿ ಅಂಡಾಣು ಬಿಡುಗಡೆ ಮಾಡುತ್ತಾರೆ. ಹೌದು! ಶತಾವರಿ ಈಸ್ಟ್ರೊಜೆನ್ ಉತ್ಪಾದನೆ ಮಾಡಿ, ಮುಟ್ಟು ಆಗುವುದಕ್ಕೆ ಕಾರಣ ಆಗುತ್ತದೆ. ಇದು ಹಾರ್ಮೋನಿನ ಉತ್ತಮ ಉತ್ಪಾದನೆಗೆ ಸಹಕಾರಿ ಆಗಿದೆ. ಜೊತೆಗೆ ಮಹಿಳೆಯರಲ್ಲಿ ಇರುವ ಅಂಡಾಣು ಉತ್ಪತ್ತಿ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿ ಆಗಿದೆ. ಮಹಿಳೆಯರಲ್ಲಿ ಅಥವಾ ಪುರುಷರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಹಲವಾರು ರೋಗಗಳು ಬರುತ್ತವೆ ಇದರಿಂದ ಸಾಕಷ್ಟು ಜನ ಬಂಜೆತನ ಸಮಸ್ಯೆಗಳು ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ದ ಮೇಕೆ ಸಾಕಷ್ಟು ಪರಿಣಾಮ ಬೀರುತ್ತದೆ. ಉತ್ತಮ ರೋಗ ನಿರೋಧಕ ಶಕ್ತಿಯೂ ಅನೇಕ ರೋಗಗಳನ್ನು ತಡೆಯಬಹುದು. ಹಾಗಾಗಿ ಶತಾವರಿ ಮೂಲಿಕೆಯು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ನಿಮ್ಮ ಗರ್ಭ ಧಾರಣೆಯ ಸಾಧ್ಯತೆ ಕೂಡ ಹೆಚ್ಚಿಸುತ್ತದೆ.

 

 

ಇನ್ನೂ ಯಾರಿಗೆ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿರಲಿಲ್ಲ ಅಂಥವರು ಶತಾವರಿ ಯಾನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಮೂತ್ರ ವಿಸರ್ಜನೆ ಸುಲಭ ಆಗುತ್ತದೆ. ಈ ಶತಾವರಿ ಬೇರನ್ನು ಅಥವಾ ಗಡ್ಡೆಯನ್ನು ಅರೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ವಸಡಿನಲ್ಲಿ ರಕ್ತ ಸ್ರಾವ ಆಗುವ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ. ಚರ್ಮ ರೋಗ ನಿವಾರಣೆಗೆ ಕೂಡ ಇದನ್ನು ಬಳಕೆ ಮಾಡುತ್ತಾರೆ. ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮ ರೋಗ ಬೇಗ ನಿವಾರಣೆ ಆಗಲು ಸಹಾಯ ಮಾಡುತ್ತದೆ. ಡೆಲಿವರಿ ಆದ ನಂತರ ಹಾಲು ಉತ್ಪತ್ತಿ ಆಗದೆ ಇದ್ದರೆ ಶತಾವರಿ ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಹಾಲು ಬೇಗ ಉತ್ಪಾದನೆ ಆಗಲು ಸಹಾಯ ಆಗುತ್ತದೆ. ಈ ಕಷಾಯ ಮಾಡುವುದು ಹೇಗೆ ಎಂದು ನೋಡೋಣ. ಶತಾವರಿ ಗಡ್ಡೆಯನ್ನು ತಂದು ಕತ್ತರಿಸಿ ಒಣಗಿಸಿ ಪುಡಿ ಮಾಡಿ ಅದನ್ನು ಬೆಳಿಗ್ಗೆ ಮತ್ತು ಸಂಜೆ 5 ಗ್ರಾಂ ನಷ್ಟು ಹಾಲು ಕಲ್ಲುಸಕ್ಕರೆ ಜೊತೆಗೆ ಸೇರಿಸಿ ಸೇವನೆ ಮಾಡುವುದರಿಂದ ಎದೆ ಹಾಲು ಉತ್ಪತ್ತಿ ಆಗಲು ಸಹಾಯ ಆಗುತ್ತದೆ. ಇಷ್ಟೊತ್ತು ಇದರ ಪ್ರಯೋಜನ ತಿಳಿದಿದ್ದೀರಿ. ಆದರೆ ಯಾವ ರೀತಿಯ ಅಡ್ದ ಪರಿಣಾಮಗಳು ಆಗಬಹುದು ಎಂದು ನೋಡೋಣ. ಶತಾವರಿ ನೈಸರ್ಗಿಕ ಮೂಲಿಕೆ ಆಗಿದ್ದು, ಅದಕ್ಕೆ ಎಷ್ಟು ಪ್ರಯೋಜನ ಇವೆಯೋ ಅಷ್ಟೇ ಎಚ್ಚರಿಕೆ ಇಂದ ಬಳಸಬೇಕು. ಶತಾವರಿ ಗಿಡ ಮೂಲಿಕೆಯನ್ನೂ ವೈದ್ಯರ ಸಲಹೆ ಮೇರೆಗೆ ಬಳಸಬೇಕು. ಯಾಕೆಂದರೆ ಕೆಲವೊಮ್ಮೆ ಈ ಔಷಧಿಯು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಬೆಳವಣಿಗೆ ಆಗಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ

Leave a comment

Your email address will not be published.