ರೈಸ್ ಬ್ರಾನ್ ಆಯಿಲ್ ನ್ನ  ಉಪಯೋಗ ಮಾಡುವುದರಿಂದ ಆಗುವ ಲಾಭಗಳು..!!

ರೈಸ್ ಬ್ರಾನ್ ಆಯಿಲ್ ನ್ನ ಉಪಯೋಗ ಮಾಡುವುದರಿಂದ ಆಗುವ ಲಾಭಗಳು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ರೈಸ್ ಬ್ರಾನ್ ಆಯಿಲ್ ನ್ನ ಯಾವ ರೀತಿ ತಯಾರು ಮಾಡುತ್ತಾರೆ? ಹಾಗೂ ಈ ಎಣ್ಣೆಯನ್ನು ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಈ ಎಣ್ಣೆ ಏಷ್ಟು ಉತ್ತಮ ಮತ್ತು ಈ ಎಣ್ಣೆಯನ್ನು ಉಪಯೋಗ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳು ಏನೇನು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಮೊದಲನೆಯದು ಈ ರೈಸ್ ಬ್ರಾನ್ ಆಯಿಲ್ ನ್ನ ಯಾವ ರೀತಿ ತಯಾರು ಮಾಡುತ್ತಾರೆ ಎಂದು ನೋಡುವುದಾದರೆ,ಅಕ್ಕಿಯನ್ನು ಪಾಲಿಶ್ ಮಾಡಿದಾಗ ಅಕ್ಕಿಕಾಳಿನ ಹೊರ ಕವಚ ಪುಡಿಯ ರೂಪದಲ್ಲಿ ಹೊರ ಬರುತ್ತದೆ. ಈ ಪುಡಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆ ಅಂಶ ಕೂಡ ಇರುತ್ತದೆ. ಈ ಪುಡಿ ಅಥವ ತೌಡು ಹೊರ ತೆಗೆ ದಾಗಾ ಸಿಗುವ ಪದಾರ್ಥವೆ ಈ ರೈಸ್ ಬ್ರಾನ್ ಆಯಿಲ್.

 

ಈ ಎಣ್ಣೆಯ ರುಚಿ ಇತರ ಅಡುಗೆ ಎಣ್ಣೆಗಳ ರುಚಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಕಾರಣದಿಂದಾಗಿ ಹಿಂದೆ ಜನರು ಇದರ ಉಪಯೋಗ ಮಾಡುತ್ತಾ ಇರಲಿಲ್ಲ. ಹಾಗೂ ಇದು ತೌಡಿನಿಂದ ತೆಗೆದ ಎಣ್ಣೆ ಎಂದು ಬಹಳಷ್ಟು ಜನರು ಇದನ್ನು ಅಲ್ಲಗಳೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮೇಲೆ ಹಲವಾರು ರೀತಿಯ ಅಧ್ಯಯನಗಳು ನಡೆದ ಬಳಿಕ ಇದರ ಗುಣನಗಳನ್ನು ಪ್ರಕಟಿಸಿದ ಬಳಿಕ ಮತ್ತೆ ಈ ಎಣ್ಣೆ ಜನಪ್ರಿಯತೆ ಪಡೆಯುತ್ತಾ ಇದೆ. ಮತ್ತು ಇದರಲ್ಲಿ ಇರುವ ಒರಿಜಿನಲ್ ಎಂಬ ಪೌಷ್ಟಿಕಾಂಶ ರಕ್ತದಲ್ಲಿ ಬೀಡು ಬಿಟ್ಟ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆಯಲು ಕೂಡ ನೆರವಾಗುತ್ತದೆ. ಮತ್ತು ಈ ಎಣ್ಣೆಯಲ್ಲಿನ ಆರೋಗ್ಯಕರ ಅಂಶ ಹೃದಯಕ್ಕೆ ಶಕ್ತಿ ನೀಡಿ ದೇಹದಲ್ಲಿ ಇರುವ ಬೊಜ್ಜಿನ ಮಟ್ಟವನ್ನು ಕಡಿಮೆ ಮಾಡುತ್ತದೆ.

 

ಈ ಎಣ್ಣೆಯನ್ನು ಬಳಕೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಇನ್ಸುಲಿನ್ ಪ್ರತಿರೋಧಕ ಉಂಟು ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ಸಹಾಯವಾಗುತ್ತದೆ. ಈ ಎಣ್ಣೆಯನ್ನು ಬಳಕೆ ಮಾಡುವುದರಿಂದ ಇನ್ನೊಂದು ಉತ್ತಮವಾದ ಲಾಭ ಏನೆಂದರೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ ಹೃದಯಕ್ಕೆ ಆಗುವ ತೊಂದರೆ ಮತ್ತು ಅಪಾಯವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ. ಈ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದೆ. ಈ ಪೌಷ್ಟಿಕಾಂಶ ನಮ್ಮ ಚರ್ಮದ ಆರೈಕೆ ಮಾಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ರೈಸ್ ಬ್ರಾನ್ ಆಯಿಲ್ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ