ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಒಮೆಗಾ 3 ಎಷ್ಟು ಉಪಯುಕ್ತ, ಹಾಗೂ ಒಮೆಗಾ 3 ನಾವು ತೆಗೆದುಕೊಳ್ಳುವ ಆಹಾರದಲ್ಲಿ ಇದ್ದರೆ ನಾವು ಯಾವೆಲ್ಲ ರೋಗಗಳಿಂದ ದೂರವಿರಬಹುದು. ಹಾಗೂ ಈ ಒಮೆಗಾ 3 ಯಾವ ಆಹಾರದಲ್ಲಿ ನಮಗೆ ಸಿಗುತ್ತದೆ ಎನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಸಣ್ಣ ಪುಟ್ಟ ವಿಷಯಗಳಿಗೆ ಡಿಪ್ರೆಶನ್ ಗೇ ಒಳಗಾಗುತ್ತಾರೆ. ಹಾಗೂ ಈ ಡಿಪ್ರೆಶನ್ ಅಂದ್ರೆ ಖಿನ್ನತೆ ಇಂದ ತಮ್ಮ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಯಾವುದೇ ಒಂದು ಕೆಲಸ ಮಾಡಲು ಇಷ್ಟ ಪಡುವುದಿಲ್ಲ. ಇದಕ್ಕೆಲ್ಲ ಕಾರಣ ಅವರು ಇರುವಂತಹ ಒಂದು ಪರಿಸ್ಥಿತಿ ಕೂಡ ಕಾರಣ ಆಗಬಹುದು. ಆದ್ರೆ ಇದರಿಂದ ಹೊರಗಡೆ ಬರಬಹುದು ಹೌದು! ಒಂದು ಅಧ್ಯಯನದ ಪ್ರಕಾರ ಯಾರು ರೆಗ್ಯೂಲರ್ ಆಗಿ ಒಮೆಗಾ 3 ವಿಟಮಿನ್ ಅನ್ನು ಸೇವಿಸುತ್ತಾರೆ ಅಂಥವರಿಗೆ ಈ ಖಿನ್ನತೆ ಸಮಸ್ಯೆ ಕಡಿಮೆ ಇರುತ್ತದಂತೆ. ಅಲ್ಲದೆ ಈ ಒಮೆಗಾ 3 ನಲ್ಲಿ ಇರುವ ಪೌಷ್ಟಿಕಾಂಶಗಳು ನಮ್ಮ ಮೆದುಳಿನ ಕಾರ್ಯವನ್ನು ಸರಿ ಮಾಡುತ್ತದೆ. ಹಾಗಾಗಿ ಯಾರಿಗೆ ಮಾನಸಿಕ ಕಾಯಿಲೆ ಇರುತ್ತದೋ ಹಾಗೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಇರುತ್ತವೆ ಅಂಥವರಿಗೆ ಒಮೆಗಾ 3 ಮಾತ್ರೆಯನ್ನು ಬಳಕೆ ಮಾಡಲು ವೈದ್ಯರು ಸೂಚಿಸುತ್ತಾರೆ. ಹಾಗೂ ಒಮೆಗಾ 3 ಬಳಕೆ ಮಾಡುವುದರಿಂದ ಮಡಿಲಿನ ಕಾರ್ಯ ಕ್ಷಮತೆ ಹೆಚ್ಚಾಗುವುದರಿಂದ ಮಾನಸಿಕ ಖಿನ್ನತೆಯಿಂದ ಬಹಳ ಬೇಗ ಹೊರಗೆ ಬರಬಹುದು.
ಕಣ್ಣಿನ ಆರೋಗ್ಯ ಸರಿ ಇಲ್ಲದಿದ್ದರೆ, ಆರೋಗ್ಯ ಸಹಜ ಕಣ್ಣಿನ ಸಮಸ್ಯೆ ಬರುವುದು ಸಾಮಾನ್ಯವಾಗಿದೆ. ಯಾರು ಆಹಾರದಲ್ಲಿ ಒಮೆಗಾ 3 ಸರಿಯಾಗಿ ತೆಗೆದುಕೊಳ್ಳುತ್ತಾರೆ ಅಂಥವರಿಗೆ ಕಣ್ಣಿನ ಸಮಸ್ಯೆ ಕಾಣಿಸುವುದಿಲ್ಲ. ಹಾಗೂ ಒಮೆಗಾ 3 ನೀವು ತೆಗೆದುಕೊಳ್ಳುವ ಆಹಾರದಲ್ಲಿ ಇದ್ದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಹಾಗೂ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ದೈಹಿಕವಾಗಿ ಉತ್ತಮವಾಗಿದೆ. ಕ್ಯಾನ್ಸರ್ ನ್ನೂ ಬಾರದಂತೆ ತಡೆ ಗಟ್ಟುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಒಮೆಗಾ 3 ತುಂಬಾ ಸಹಕಾರಿ. ಇನ್ನೂ ಈ ಒಮೆಗಾ 3 ಯಾವೆಲ್ಲ ಆಹಾರದಲ್ಲಿ ಇರುತ್ತದೆ ಎಂದು ನೋಡುವುದಾದರೆ, ಮೊದಲನೆಯದಾಗಿ ಮೀನಿನಲ್ಲಿ ಈ ಒಮೆಗಾ 3 ಜಾಸ್ತಿ ಸಿಗುತ್ತದೆ. ಅದ್ರಲ್ಲೂ ಸಾಲ್ಮನ್ ಫಿಶ್ ಹಾಗೂ ಬಂಗಡೆ ಫಿಶ್ ನಲ್ಲಿ ಒಮೆಗಾ 3 ಹೇರಳವಾಗಿ ಇರುತ್ತದೆ. ಇನ್ನೂ ಈ ವಾಲ್ ನಟ್ ಲಿ ಕೂಡ ಒಮೆಗಾ 3 ಹೆಚ್ಚಿರುತ್ತದೆ. ಈ ವಾಲ್ ನಟ್ ಅಲ್ಲಿರುವ ಪೌಷ್ಟಿಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಇವೆ. ಹಾಗೂ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ದಿನಕ್ಕೆ ನಾಲ್ಕು ವಾಲ್ ನಟ್ ನ್ನೂ ಸೇವನೆ ಮಾಡುವುದರಿಂದ ನಮ್ಮ ಮೆದುಳಿನ ಆರೋಗ್ಯ ಉತ್ತಮವಾಗಿ ಇರುತ್ತದೆ. ಇನ್ನೂ ಬೀಜಗಳಲ್ಲಿ ಸಹ ಒಮೆಗಾ 3 ಹೆಚ್ಚಿರುತ್ತದೆ. ಅದ್ರಲ್ಲಿ ಕುಂಬಳಕಾಯಿ ಬೀಜದಲ್ಲಿ, ಆಲಿವ್ ಎಣ್ಣೆ ಅಲ್ಲಿ ಸಹ ಒಮೆಗಾ 3, ಕೊಬ್ಬಿನ ಅಂಶ ಹೆಚ್ಚು ಪ್ರಮಾಣದಲ್ಲಿ ಸಿಗುತ್ತದೆ.
ಇನ್ನೂ ಬೆಣ್ಣೆ ಹಣ್ಣಿನಲ್ಲಿ ಆರೋಗ್ಯವರ್ಧಕ ಗುಣ ಇದೆ. ಈ ಹಣ್ಣಿನಲ್ಲಿ 250mg ಅಷ್ಟು ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ. ಕುಂಬಳಕಾಯಿ ಬೀಜದಲ್ಲಿ ಒಮೆಗಾ 3, ಕೊಬ್ಬಿನ ಅಂಶ ಇರುವುದರಿಂದ ಸಸ್ಯಾಹಾರಿಗಳಿಗೆ ಇದು ಉತ್ತಮವಾಗಿದೆ. ಇನ್ನೂ ಅಗಸೆ ಬೀಜದಲ್ಲಿ ಒಮೆಗಾ 3 ಇರುತ್ತದೆ. ಇದೊ ಸಹ ಸಸ್ಯ ಹಾರಿಗಳಿಗೆ ಉತ್ತಮ ಆಹಾರ ಎಂದು ಹೇಳಲಾಗುತ್ತದೆ. ಇನ್ನೂ ಮೊಟ್ಟೆಯ ಹಳದಿ ಭಾಗದಲ್ಲಿ ಒಮೆಗಾ 3 ಅಂಶ ಇದೆ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇನ್ನೂ ಸೋಯಾಬೀನ್, ಗೋಡಂಬಿ ಇವೆರಡರಲ್ಲಿ ಒಮೆಗಾ 3 ವಿಟಮಿನ್, ಫ್ಯಾಟಿ ಆಸಿಡ್ ಇರುತ್ತದೆ. ಒಮೆಗಾ 3 ಕೊರತೆ ಇದ್ದರೆ ವೈದ್ಯರು ಸೂಚಿಸಿದಂತೆ ಅದರ ಸಪ್ಲಿಮೆಂಟ್ ಅನ್ನು ನೀವು ತೆಗೆದುಕೊಳ್ಳಬಹುದು. ಒಮೆಗಾ 3 ನ್ಯಾಚುರಲ್ ಆಗಿ ಸಿಗುವಾಗ ಮಾತ್ರೆ ತೆಗೆದುಕೊಳ್ಳುವುದು ಅವಶ್ಯಕತೆ ಇಲ್ಲ. ಅದ್ರಲ್ಲಿ ಯಾರು ಮೀನನ್ನು ತಿನ್ನುತ್ತಾರೆ ಅವರು ಸಪ್ಲಿಮೆಂಟ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಾನ್ ವೆಜ್ ಅವರು ಮೀನಿನಲ್ಲಿ ಹಾಗೂ ವೆಜ್ ಅವರು ಕುಂಬಳಕಾಯಿ, ಮೊಟ್ಟೆ, ವಾಲ್ ನಟ್, ಗೋಡಂಬಿ, ಅಗಸೆ ಬೀಜ, ಬೆಣ್ಣೆ ಹಣ್ಣು, ಆಲಿವ್ ಎಣ್ಣೆ ಹೀಗೆ ಇವೆಲ್ಲವುಗಳ ಮೂಲಕ ಈ ವಿಟಮಿನ್ ಪಡೆದು ಆರೋಗ್ಯವಾಗಿ ಇರಬಹುದು. ಅಗಸೆ ಬೀಜದ ಚಟ್ನಿ ಪುಡಿ ಮಾಡಿಕೊಂಡು ದಿನಪ್ರತಿ ಆಹಾರದೊಂದಿಗೆ ಸೇವಿಸಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.